Top

ಶಾಸಕರಿಗೆ ಬಿಗಿ ಕಾವಲು : ರಾಜಶೇಖರ ಪಾಟೀಲ್ ನಡೆ ಕುತೂಹಲ

ಶಾಸಕರಿಗೆ ಬಿಗಿ ಕಾವಲು : ರಾಜಶೇಖರ ಪಾಟೀಲ್ ನಡೆ ಕುತೂಹಲ
X

ಬೆಂಗಳೂರು : ಬಿಡದಿಯ ಈಗಲ್ ಟನ್ ರೆಸಾರ್ಟ್​ನಲ್ಲಿದ್ದ ಕಾಂಗ್ರೆಸ್ ಶಾಸಕರ ವಾಸ್ತವ್ಯವನ್ನು ಪದೇಪದೆ ಬದಲಿಸಲು ಮುಖಂಡರು ಚಿಂತನೆ ನಡೆಸಿದ್ದಾರೆ. ಇದೇ ವೇಳೆ ಅನಿವಾರ್ಯ ಕಾರಣ ಹೊರತು ಹೊರಗೆ ಹೋಗದಂತೆ ಶಾಸಕರಿಗೆ ತಡೆ ಹಾಕಲು ರೆಸಾರ್ಟ್​ ಬಾಗಿಲಿಗೆ ಬೀಗ ಹಾಕಲಾಗಿದೆ. ಇದೇ ವೇಳೆ ಜೆಡಿಎಸ್ ಶಾಸಕರು ಹೈದರಾಬಾದ್ ಅಥವಾ ಕೊಚ್ಚಿನ್​ಗೆ ವಾಸ್ತವ್ಯ ಬದಲಿಸಲು ಬಯಸಿದ್ದಾರೆ.

ಗುರುವಾರ ಬೆಳಗ್ಗೆ ಪ್ರತಿಭಟನೆ ನಂತರ ಈಗಲ್ಟನ್ ರೆಸಾರ್ಟ್​ಗೆ ಬಸ್ ಮೂಲಕ ತೆರಳಿದ್ದ ಶಾಸಕರು ಇದೀಗ 10 ದಿನಗಳ ಕಾಲ ವಿವಿಧೆಡೆ ಪ್ರವಾಸ ತೆರಳಲು ಚಿಂತನೆ ನಡೆಸಿದ್ದಾರೆ.

ಕೇರಳದ ಅಲೆಪ್ಪಿ ಇಲ್ಲವೇ ಕೊಚ್ಚಿನ್ ಗೆ ಸ್ಥಳಾಂತರ ಮಾಡಲು ಒಂದು ತಂಡ ಬಯಸಿದ್ದರೆ, ಮತ್ತೊಂದು ತಂಡ ಪಂಜಾಬ್​ಗೆ ಹೋಗುವ ಇಂಗಿತ ವ್ಯಕ್ತಪಡಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಯಾವ ಶಾಸಕರು ಹೋಗದಂತೆ ನಿಗಾ ವಹಿಸಲಾಗುತ್ತಿದೆ. ಶಾಸಕರ ಉಸ್ತುವಾರಿಯನ್ನು ಡಿ.ಕೆ.ಸುರೇಶ್ ಹೆಗಲಿಗೆ ವಹಿಸಲಾಗಿದೆ.

ಇದೇ ವೇಳೆ ಶಾಸಕ ರಾಜಶೇಖರ ಪಾಟೀಲ್ ಅನಾರೋಗ್ಯದ ಕಾರಣ ಹೊರಗೆ ಹೋಗಲು ಬಯಸಿದಾಗ ಗೊಂದಲ ಉಂಟಾಯಿತು. ಪ್ರಿಯಾಂಕ್ ಖರ್ಗೆ ಬಂದು ಮಾಧ್ಯಮ ಹಾಗೂ ಪೊಲೀಸರಿಗೆ ಸ್ಪಷ್ಟನೆ ನೀಡಿದ ನಂತರ ಅವರನ್ನು ಹೊರಗೆ ಹೋಗಲು ಬಿಡಲಾಯಿತು.

Next Story

RELATED STORIES