Top

ವಿದ್ವತ್​ ಮೇಲೆ ಹಲ್ಲೆ: ನಲಪಾಡ್​ ಸಹಚರ ಅಭಿಷೇಕ್​ಗೆ ಜಾಮೀನು

ವಿದ್ವತ್​ ಮೇಲೆ ಹಲ್ಲೆ: ನಲಪಾಡ್​ ಸಹಚರ ಅಭಿಷೇಕ್​ಗೆ ಜಾಮೀನು
X

ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ನಲಪಾಡ್ ಸಹಚರ ಅಭಿಷೇಕ್​ಗೆ ಷರತ್ತು ಬದ್ಧ ಜಾಮೀನು ದೊರೆತಿದೆ.

ಪ್ರಕರಣದ 7 ನೇ ಆರೋಪಿ ಅಭಿಷೇಕ್​ಗೆ ಹೈಕೋರ್ಟ್ ರಜಾಕಾಲದ ಪೀಠದಿಂದ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನ್ಯಾ.ಜಾನ್ ಮೈಕಲ್ ಕುನ್ಹಾ ಅವರಿದ್ದ ರಜಾ ಕಾಲದ ಪೀಠ, 2 ಲಕ್ಷ ಬಾಡ್ , ಇಬ್ಬರು ಶ್ಯೂರಿಟಿಯೊಂದಿಗೆ ಜಾಮೀನು ನೀಡಿದ್ದು, ಸಾಕ್ಷಿ‌ ನಾಶಪಡಿಸದಂತೆ ಷರತ್ತು ವಿಧಿಸಿದೆ. ಫೆ.17 ರಂದು ಯುಬಿಸಿಟಿಯ ಫರ್ಜಿ ಕಫೆಯಲ್ಲಿ ಘಟನೆ ನಡೆದಿತ್ತು.

Next Story

RELATED STORIES