Top

ರಜನಿಕಾಂತ್ ಅಭಿನಯದ "ಕಾಲ" ಜೂನ್​ 7ಕ್ಕೆ ರಿಲೀಸ್

ರಜನಿಕಾಂತ್ ಅಭಿನಯದ ಕಾಲ ಜೂನ್​ 7ಕ್ಕೆ ರಿಲೀಸ್
X

ಕಬಾಲಿ ಚಿತ್ರದ ನಂತರ ಸೂಪರ್​ ಸ್ಟಾರ್​ ರಜಿನಿಕಾಂತ್​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಕಾಳ. ಈ ಚಿತ್ರಕ್ಕು ಮುನ್ನಾ 2.O ಸಿನಿಮಾ ತೆರೆಗೆ ಬರಬೇಕಿತ್ತು. ಆದರೇ ಕಾರಣಾಂತರಗಳಿಂದ ದಿನಾಂಕ ಮುಂದೂಡುತ್ತಾ ಹೋಯ್ತು.

ಈಗ ಇದರ ನಡುವಲ್ಲೆ ಕಾಳ ಚಿತ್ರ ರಿಲೀಸ್​ಗೆ ಸಂಪೂರ್ಣವಾಗಿ ರೆಡಿಯಾಗಿದೆ. ಹಿಂದೆಯು ಕೂಡ ಚಿತ್ರದ ನಿರ್ಮಾಪಕ ಧನುಶ್​ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಏಪ್ರಿಲ್​ 27ಕ್ಕೆ ಚಿತ್ರ ರಿಲೀಸ್​ ಮಾಡುವುದಾಗಿ ಹೇಳಿಕೊಂಡಿದ್ದರು.. ಆದ್ರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿತ್ತು. ಆದ್ರೆ ಈಗ ಕಾಳ ಚಿತ್ರದ ರಿಲೀಸ್​ ಡೇಟ್​ ನಿಗದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಚಿತ್ರ ನಿರ್ಮಾಪಕ ಧನುಶ್, ಜೂನ್​ 7ಕ್ಕೆ ಚಿತ್ರವನ ರಿಲೀಸ್​​ ಮಾಡುವುದನ್ನು ಖಚಿತ ಪಡಿಸಿದ್ಧಾರೆ. ಇನ್ನು ಈ ಚಿತ್ರಕ್ಕೆ ಪ್ರತಿ ಸ್ಪರ್ಧಿಯಂತೆ ಹಾಲಿವುಡ್​ನ ಮೋಸ್ಟ್​ ಅಡ್ವೆಂಚರಸ್​ ಸಿನಿಮಾ ಜ್ಯುರಾಸಿಕ್​ ಪಾರ್ಕ್​ ಕೂಡ ಇದೆ ಜೂನ್​8 ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ. ಈ ಮೊದಲು ಜ್ಯುರಾಸಿಕ್​ ಪಾರ್ಕ್​ ಸಿನಿಮಾ ಜೂನ್​ 22ಕ್ಕೆ ರಿಲೀಸ್​ ಡೇಟ್​ ಫಿಕ್ಸ್​ ಮಾಡಿಕೊಂಡಿತ್ತು.. ಆದ್ರೆ ಚಿತ್ರ ಎರಡು ವಾರಗಳ ಮುಂಚಿತವಾಗಿಯೆ ರಿಲೀಸ್​ ಆಗಿ ವಿಶ್ವ ಮಟ್ಟದಲ್ಲಿ ಪೈಪೋಟಿ ಕೊಡಲಿದೆ.

Next Story

RELATED STORIES