Top

ಜೂನ್ 11ಕ್ಕೆ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ

ಜೂನ್ 11ಕ್ಕೆ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ
X

ಬೆಂಗಳೂರು : ಮೇ 3ರಂದು ಬಿಜೆಪಿಯ ಶಾಸಕ ವಿಜಯಕುಮಾರ್ ನಿಧನದಿಂದ, ಸ್ಥಗಿತಗೊಂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂನ್ 11ರಂದು ಚುನಾವಣೆ ನಡೆಯಲಿದೆ.

ಈ ಕುರಿತು ರಾಜ್ಯ ಚುನಾವಣಾ ಆಯೋಗ, ಅಧಿಸೂಚನೆ ಹೊರಡಿಸಿದ್ದು, ನಾಳೆಯಿಂದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಮೇ 25 ಕೊನೆಯ ದಿನಾಂಕವಾಗಿದೆ. ಮೇ 28ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಹೀಗಾಗಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ತಿಳಿಸಿದೆ.

ಇನ್ನೂ ಜೂನ್ 11ಕ್ಕೆ ಜಯನಗರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಜೂನ್ 16ರಂದು ಮತಏಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮೂಲಕ ಶಾಸಕ ವಿಜಯಕುಮಾರ್ ನಿಧನದಿಂದ ಸ್ಥಗಿತಗೊಂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಚಾಲನೆ ದೊರೆತಿದೆ.

Next Story

RELATED STORIES