Top

ಮತ್ತೆ ಒಂದಾದ ಜಮೀರ್, ಕುಮಾರಸ್ವಾಮಿ

ಮತ್ತೆ ಒಂದಾದ ಜಮೀರ್, ಕುಮಾರಸ್ವಾಮಿ
X

ಇಷ್ಟು ದಿನ ಹಾವು ಮುಂಗೂಸಿಯಂತೆ ಕಿತ್ತಾಡುತ್ತಿದ್ದ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಶಾಂಘ್ರಿಲಾ ರೆಸಾರ್ಟ್ ನಲ್ಲಿ ಮತ್ತೆ ಒಂದಾಗಿದ್ದಾರೆ. ಈ ವೇಳೆ ಮಾತನಾಡಿದ ಜಮೀರ್ ಅಹಮದ್, ಹೆಚ್ಡಿಕೆ ಜೊತೆ ಮಾತನಾಡಿ ಖುಷಿಯಾಯ್ತು ಎಂದಿದ್ದಾರೆ.

ಕುಮಾರಸ್ವಾಮಿ ಜೊತೆ ಮಾತನಾಡಿ ಎರಡುವರೆ ವರ್ಷವಾಗಿತ್ತು. ಇವತ್ತು ಮಾತನಾಡಿ ಖುಷಿಯಾಯ್ತು, ರಾಜಕೀಯದಲ್ಲಿ ನಾನು ಅವರನ್ನ ವಿರೋಧ ಮಾಡಿದ್ದೆ, ಅವರು ನನ್ನನ್ನ ವಿರೋಧ ಮಾಡಿದ್ದರು ಅಷ್ಟೇ. ಈಗ ಜೆಡಿಎಸ್ ಜೊತೆಗೆ ಸರ್ಕಾರ ರಚಿಸಲು ಪಕ್ಷ ತೀರ್ಮಾನಿಸಿದೆ. ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ. ಅವರ ಜೊತೆ ಮಾತನಾಡಿ ಖುಷಿಯಾಯ್ತು ಎಂದಿದ್ದಾರೆ. ಈ ವೇಳೆ ಜಮೀರ್ - ಹೆಚ್ ಡಿ ಕೆ ದೋಸ್ತಿಗೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಕಾರಣಾನಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇಲ್ಲ ಇದನ್ನ ಹೇಳೋಕ್ಕಾಗಲ್ಲ, ನಿಮ್ಮ ಪ್ರಶ್ನೆ ಬೇರೆ ಇದೆ. ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಜಮೀರ್ ಹೇಳಿದ್ದಾರೆ.

Next Story

RELATED STORIES