Top

ಬೆಳ್ಳಿಪರದೆ ಮೇಲೆ ನಟಿ ಸೌಂದರ್ಯ ಜೀವನ ಚರಿತ್ರೆ..?

ಬೆಳ್ಳಿಪರದೆ ಮೇಲೆ ನಟಿ ಸೌಂದರ್ಯ ಜೀವನ ಚರಿತ್ರೆ..?
X

ಸೌಂದರ್ಯ... ಈ ಹೆಸರನ್ನ ಭಾರತೀಯ ಚಿತ್ರರಂಗ ಮರೆಯಲು ಸಾಧ್ಯವೇ..? ಈಗ ಮತ್ತೊಮ್ಮೆ ಸೌಂದರ್ಯ ಸಿನಿ ಛಾಯೆ ಟಾಲಿವುಡ್​ನಲ್ಲಿ ಮೂಡುವ ಸಂಭವ ಒದಗಿ ಬರುವ ಸಾಧ್ಯತೆ ಕಾಣುತ್ತಿದೆ.

ಹೌದು... ‘ಪೆಳ್ಳಿ ಚೂಪುಲು’, ‘ಮೆಂಟಲ್ ಮಧಿಲೋ’ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ರಾಜ್, ಸೌಂದರ್ಯರವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ ಸೌಂದರ್ಯ ಪಾತ್ರಕ್ಕೆ ಯಾರು ಜೀವ ತುಂಬುತ್ತಾರೆ..? ಯಾರ ಕಲ್ಪನೆಯಲ್ಲಿ ಸೌಂದರ್ಯ ಬಯೋಪಿಕ್ ಮೂಡಿಬರಲಿದೆ ಅನ್ನೋದು ಕಾದುನೋಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಸೌಂದರ್ಯ ಬಯೋಪಿಕ್​ಗೆ ಅವರ ಕುಟುಂಬದ ಒಪ್ಪಿಗೆ ಕೂಡ ಬೇಕಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಎಲ್ಲಾ ಮಾಹಿತಿ ಹೊರಬೀಳಲಿದೆ.

ಟಾಲಿವುಡ್​ನಲ್ಲೀಗ ಬಯೋಪಿಕ್ ಸಿನಿಮಾಗಳ ಕ್ರೇಜ್ ಹೆಚ್ಚಾಗಿದ್ದು, ನಟಿ ಸಾವಿತ್ರಿಯವರ ಜೀವನಚರಿತ್ರೆ ‘ಮಹಾನಟಿ’ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಮಹಾನಟಿ ಸಾವಿತ್ರಿಯಾಗಿ ಕೀರ್ತಿ ಸುರೇಶ್ ಶೈನ್ ಆಗ್ತಿದ್ರೆ, ಮಹಾನಟಿಯ ನಿರ್ಮಾಪಕ ಪುರುಸೊತ್ತು ಇಲ್ಲದ ಹಾಗೆ ಗರಿಗರಿ ನೋಟನ್ನ ಎಣಿಸುತ್ತಿದ್ದಾರೆ. ಅತ್ತ ಬಾಲಯ್ಯ ಕೂಡ ‘ಎನ್ ಟಿ ಆರ್’ ಬಯೋಪಿಕ್​ಗೆ ಬಣ್ಣ ಹಚ್ಚಿದ್ದಾರೆ. ಹೀಗೆ ಬಯೋಪಿಕ್ ಪರ್ವ ತೆಲುಗು ಚಿತ್ರರಂಗದಲ್ಲಿ ಶುರುವಾಗಿರುವಾಗಲೇ ಕನ್ನಡತಿ ಸೌಂದರ್ಯರವರ ಜೀವನ ಚರಿತ್ರೆಮಾಲೆ ಸಿದ್ದವಾಗುವ ಸುದ್ದಿ ಚಿತ್ರರಂಗದಿಂದ ಕೇಳಿಬರುತ್ತಿದೆ.

Next Story

RELATED STORIES