Top

ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ

ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ
X

ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಬಿಎಸ್ ವೈಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನ ವಿರೋಧಿಸಿ, ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಜಭವನವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ನಾವು ಪ್ರತಿಭಟನೆ ಮಾಡುತ್ತೇವೆ ಬಳಿಕ ರಾಜಭವನದ ಎದುರು ಪರೇಡ್ ಮಾಡುತ್ತೇವೆ. ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಸಿಎಂಗಳ ಜೊತೆ ಮಾತನಾಡಿದ್ದೇನೆ. ದೇಶದ ರಕ್ಷಣೆಗೆ ಕೈಜೋಡಿಸಿ ಎಂದಿದ್ದೇವೆ ಎಂದರು.ಬಿಜೆಪಿ ಐಡಿ ಮೂಲಕ ಬೆದರಿಸುತ್ತಿದೆ ಆನಂದ್ ಸಿಂಗ್ ಗೂ ಕೂಡ ಬಿಜೆಪಿ ಬೆದರಿಕೆಯೊಡ್ಡಿ ಹಿಡಿದುಕೊಂಡಿದೆ ನಾವೆಲ್ಲ ನಮ್ಮ ಶಾಸಕರ ರಕ್ಷಣೆಯಲ್ಲಿದ್ದೇವೆ. ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಹೊರಟಿದೆ. ರಾಜ್ಯದ ಜನತೆ ಬಿಜೆಪಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

Next Story

RELATED STORIES