Top

“ಪೈಲ್ವಾನ್” ಚಿತ್ರದಲ್ಲಿ ಬಾಲಿವುಡ್ ಚೆಲುವೆ ಜೊತೆ ಕಿಚ್ಚ ಡ್ಯುಯೆಟ್

“ಪೈಲ್ವಾನ್” ಚಿತ್ರದಲ್ಲಿ ಬಾಲಿವುಡ್ ಚೆಲುವೆ ಜೊತೆ ಕಿಚ್ಚ ಡ್ಯುಯೆಟ್
X

ಸಿನಿಮಾ ಡೆಸ್ಕ್ : ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನ ಒನ್ ಆಫ್ ದ ಆಲ್​ಟೈಮ್ ಬ್ಯುಸಿಯೆಸ್ಟ್ ಸ್ಟಾರ್. ಕನ್ನಡವಷ್ಟೇ ಅಲ್ಲದೆ ಪರಭಾಷಾ ಸಿನಿಮಾಗಳಲ್ಲೂ ಕಿಚ್ಚನಿಗೆ ಡಿಮ್ಯಾಂಡೋ ಡಿಮ್ಯಾಂಡ್. ಸದ್ಯ ಯೂನಿವರ್ಷಸಲ್ ಸ್ಟಾರ್ ಆಗಿ ಮಿಂಚ್ತಿರೋ ಕಿಚ್ಚ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅಂತಹ ಕಿಚ್ಚನಿಗೆ ಈ ಬಾರಿ ​ಬಾಲಿವುಡ್​ನ ಬಳಕೋ ಬಳ್ಳಿ ಆಕಾಂಕ್ಷಾ ಸಿಂಗ್ ಜೊತೆಯಾಗ್ತಿದ್ದಾರೆ.

ಯೆಸ್, ಆಕಾಂಕ್ಷಾ 27ರ ಹರೆಯದ ರಾಜಸ್ಥಾನಿ ಪೋರಿ. ಕಳೆದ ವರ್ಷ ಬಿಟೌನ್​ನಲ್ಲಿ ತೆರೆಕಂಡ “ಬದ್ರಿನಾಥ್ ಕಿ ದುಲ್ಹಾನಿಯ” ಚಿತ್ರದಲ್ಲಿ ಕಂಗೊಳಿಸಿದ ಚೆಲುವೆ. ಅಲ್ಲದೆ ಅನೇಕ ಹಿಂದಿ ಸೀರಿಯಲ್​ಗಳಲ್ಲಿ ಮಿಂಚಿರುವ ಗ್ಲಾಮರ್ ಡಾಲ್. ಇಂತಿಪ್ಪ ಸುಂದರಿ ನಮ್ಮ “ವೀರ ಮಧಕರಿ” ಜೊತೆ “ಪೈಲ್ವಾನ್” ಚಿತ್ರದಲ್ಲಿ ಕುಣಿಯಲಿದ್ದಾಳೆ.

ಕಟ್ಟುಮಸ್ತಾದ ದೇಹದ ಕಿಚ್ಚನನ್ನ ಅದ್ಧೂರಿಯಾಗಿ ಫೋಟೋ ಶೂಟ್ ಮಾಡಿಸಿ, ಅಭಿಮಾನಿಗಳ ಹೃದಯಕ್ಕೆ ಡೈರೆಕ್ಟ್ ಬಾಣ ಬಿಟ್ಟಿದ್ದ ಟೀಂ“ಪೈಲ್ವಾನ್”, ಇದೀಗ ಮತ್ತೊಂದು ಹೊಸ ಖಬರ್ ಹೊತ್ತು ಬಂದಿದೆ. “ಪೈಲ್ವಾನ್​”ಗೆ ಸಂಗಾತಿ ಯಾರು ಅನ್ನೋ ಪ್ರಶ್ನೆಗೆ ಅಧಿಕೃತ ಉತ್ತರ ಕೊಟ್ಟಿದೆ. ಬಾಲಿವುಡ್​ ಬೆಡಗಿ ಆಕಾಂಕ್ಷಾ ಸಿಂಗ್ “ಪೈಲ್ವಾನ್” ಕಿಚ್ಚನ ಪಕ್ಕಾ ನಿಲ್ಲೋ ಪೋರಿ ಎಂದು ಘೋಷಿಸಿದೆ.

ಇನ್ನು ಬರಿ ಹೀರೋಯಿನ್ ಬಗ್ಗೆ ಹೇಳಿ ಮುಗಿಸಿದ್ರೆ , ಈ ಸ್ಟೋರಿಗೆ ಫುಲ್ ಸ್ಟಾಫ್ ಬಿಳೋದಿಲ್ಲ. ಖಡಕ್ ವಿಲನ್ ಬಗ್ಗೆ ತಿಳಿಸಲೇ ಬೇಕು. ಬಾಲಿವುಡ್ ನಟ ಕರಾವಳಿ ಕನ್ನಡಿಗ ಸುನೀಲ್ ಶೆಟ್ಟಿ “ಪೈಲ್ವಾನ್” ಎದುರು ಮುಷ್ಠಿ ಕಟ್ಟಿ ಕಾದಾಡಲಿದ್ದಾರೆ. ಇವ್ರಜೊತೆಗೆ ಮತ್ತೊಬ್ಬ ರಗಡ್ ವಿಲನ್ ಕಬೀರ್ ದುಹಾನ್ ಸಿಂಗ್ ಕೂಡ ಕಿಚ್ಚನ ಎದುರು ಡೈಲಾಗ್ ಹೊಡೆಯಲಿದ್ದಾರೆ.

ಹೆಬ್ಬುಲಿ ಖ್ಯಾತಿಯ ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಌಕ್ಷನ್ ಕಟ್ ಹೇಳೋದ್ರ ಜೊತೆಗೆ ತಮ್ಮದೇ ಹೋಮ್ ಬ್ಯಾನರ್ ಆರ್ ಆರ್ ಮೋಷನ್ ಪೋಸ್ಟರ್ ಲಾಂಛನದಲ್ಲಿ ನಿರ್ಮಿಸ್ತಿದ್ದಾರೆ. ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿರೋ ಪೈಲ್ವಾನ್ ಟೀಂ ಇದೇ ವಾರದಲ್ಲಿ ಶೂಟಿಂಗ್ ಶುರು ಮಾಡಲಿದೆ.

Next Story

RELATED STORIES