ನಟಿ ಅನು ಜೊತೆ ಬಿಗ್ ಬಾಸ್ ಅಯ್ಯಪ್ಪ ಎಂಗೇಜ್

X
TV5 Kannada17 May 2018 12:29 PM GMT
ಬಿಗ್ ಬಾಸ್ ಖ್ಯಾತಿಯ ಅಯ್ಯಪ್ಪ ಹಾಗೂ ಸ್ಯಾಂಡಲ್ವುಡ್ ನಟಿ ಅನು ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದಾರೆ. ಇಂದು ಬೆಂಗಳೂರಿನ ಕೊಡವ ಸಮಾಜದಲ್ಲಿ ಎರಡು ಕುಟುಂಬಗಳ ಸಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಳ್ಳೋ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಯ್ಯಪ್ಪ ಮಾಜಿ ಕ್ರಿಕೆಟಿಗನಾಗಿದ್ದು, ಕರ್ನಾಟಕ ಪರ ರಣಜಿಯಲ್ಲಿ ಹಲವು ಪಂದ್ಯಗಳನ್ನಾಡಿದ್ದಾರೆ. ನಟಿ ಅನು ಕರ್ವ, ಕಥಾ ವಿಚಿತ್ರ, ಲೈಫು ಸೂಪರ್, ಪಾನಿಪುರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಅನು ಮತ್ತು ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮದುವೆ ಡೇಟ್ ಸದ್ಯದಲ್ಲೇ ಫಿಕ್ಸ್ ಆಗಬೇಕಿದೆ. ಇಬ್ಬರೂ ಸಿನಿಮಾ ಹಿನ್ನಲೆಯ ಕುಟುಂಬದಿಂದ ಬಂದಿರುವುದರಿಂದ ಮದುವೆಗೆ ಸ್ಯಾಂಡಲ್ವುಡ್ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ.
Next Story