Top

‘ನಟಸಾರ್ವಭೌಮ’ನ ಎದುರು ‘ಬಾಹುಬಲಿ’ಯ ಕಾಲಕೇಯ ಅಬ್ಬರ

‘ನಟಸಾರ್ವಭೌಮ’ನ ಎದುರು ‘ಬಾಹುಬಲಿ’ಯ ಕಾಲಕೇಯ ಅಬ್ಬರ
X

ಸಿನಿಮಾ ಡೆಸ್ಕ್ : ಸ್ಯಾಂಡಲ್​ವುಡ್ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ “ನಟಸಾರ್ವಭೌಮ” ಸಿನಿಮಾ ದಿನದಿಂದ ದಿನಕ್ಕೆ ಒಂದಿಲ್ಲೊಂದು ಸ್ಪೆಷಲ್ ಸಮಾಚಾರಗಳಿಂದ ಗಮನ ಸೆಳೆಯುತ್ತಿದೆ. ಮೊನ್ನೆ 34 ವರ್ಷದ ನಂತ್ರ ಪುನೀತ್ ಹಿರಿಯ ನಟಿ ಬಿ.ಸರೋಜಾದೇವಿ ಜೊತೆಗೆ ನಟಿಸುತ್ತಿರುವ ಸಮಾಚಾರವನ್ನ ಸ್ವತಃ ಟಿವಿ5 ಸುದ್ದಿ ಮಾಡಿತ್ತು. ಈಗ ನಟಸಾರ್ವಭೌಮ ಬಗಳಗದಿಂದ ಮಗದೊಂದು ಇಂಟ್ರಸ್ಟಿಂಗ್ ಮ್ಯಾಟರ್ ಹೊರಬಂದಿದೆ.

ಭಾರತೀಯ ಚಿತ್ರರಂಗದ ಖ್ಯಾತಿಯನ್ನ ಇಡೀ ವಿಶ್ವಕ್ಕೆ ಸಾರಿದ ಬಾಹುಬಲಿ ಚಿತ್ರದ ವಿಶೇಷ ನಟರೊಬ್ಬರು “ನಟಸಾರ್ವಭೌಮ” ಬಳಗವನ್ನ ಸೇರಿಕೊಳ್ಳಲಿದ್ದಾರೆ. ಗಿಬ್ರಿಷ್ ಭಾಷೆಯನ್ನಾಡುತ್ತ “ಬಾಹುಬಲಿ” ಮೊದಲ ಭಾಗದಲ್ಲಿ ಮಿಂಚಿದ್ದ ಕಾಲಕೇಯ, ಪವರ್ ಸ್ಟಾರ್​ ಮುಂದೆ ವಿಲನ್ ಆಗಿ ಅಬ್ಬರಿಸಲಿದ್ದಾರೆ.

ಟಾಲಿವುಡ್​ನ ಖ್ಯಾತ ಖಳ ನಟ ಪ್ರಭಾಕರ್ ಅಲಿಯಾಸ್ ಕಾಲಕೇಯ “ನಟಸಾರ್ವಭೌಮ” ಚಿತ್ರದಲ್ಲಿ ತಮ್ಮ ವಿಲನ್ ಖದರ್ ತೋರಿಸಲಿದ್ದಾರೆ. ಈ ಮೊದಲು ಪ್ರಭಾಕರ್ ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ, ಕೋಕೋ ಹಾಗೂ ಚೌಕ ಚಿತ್ರದಲ್ಲಿ ನಟಿಸಿದ್ದರು. ಈಗ ಮಗದೊಮ್ಮೆ ಕನ್ನಡದಲ್ಲಿ ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದಲ್ಲಿ ನಟಿಸಲಿದ್ದಾರೆ.

Next Story

RELATED STORIES