Top

ದೊಣ್ಣೆ, ಕೊಡಲಿ ಹಿಡಿದು ಮಕ್ಕಳನ್ನು ರಕ್ಷಿಸುತ್ತಿದ್ದಾರೆ ಪೋಷಕರು

ದೊಣ್ಣೆ, ಕೊಡಲಿ ಹಿಡಿದು ಮಕ್ಕಳನ್ನು ರಕ್ಷಿಸುತ್ತಿದ್ದಾರೆ ಪೋಷಕರು
X

ತುಮಕೂರು: ಪಾವಗಡದಲ್ಲಿ ಕೆಲ ದಿನಗಳಿಂದ ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆ, ಕಳ್ಳರ ಹಾವಳಿ ವದಂತಿಗೆ ಬೇಸತ್ತ ಗ್ರಾಮಸ್ಥರು, ತಮ್ಮ ಮಕ್ಕಳ ರಕ್ಷಣೆಗೆ ರಾತ್ರಿಯಿಡೀ ನಿದ್ದೆಗೆಟ್ಟು ಕಾವಲುಕಾಯುತ್ತಿದ್ದಾರೆ.ಪಾವಗಡ ತಾಲೂಕಿನ ದೇವಲಕೆರೆ, ಕೆಟಿ ಹಳ್ಳಿ ,ಶೈಲಾಪುರ, ಬೆಳ್ಳಿಬಟ್ಟಲು , ಸೂಲನಾಯಕನಹಳ್ಳಿ , ಗೊಲ್ಲಟರಹಟ್ಟಿಯಲ್ಲಿ 30 ಜನರ ಕಳ್ಳರ ಹಾವಳಿ ವದಂತಿ ಹಬ್ಬಿದ್ದು, ಪೋಷಕರು ಕಂಗಾಲಾಗಿದ್ದಾರೆ.ಗ್ರಾಮಸ್ಥರೆಲ್ಲ ಕೊಡಲಿ, ಕುಡುಗೋಲು, ದೊಣ್ಣೆ ಹಿಡಿದು ಓಡಾಡುತ್ತಿದ್ದಾರೆ.ರಾತ್ರಿ ಹೊತ್ತು ಗಸ್ತು ತಿರುಗಬೇಕೆಂದು ಕಳೆದು ಒಂದು ವಾರದಿಂದ ಅರಸಿಕೆರೆ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Next Story

RELATED STORIES