Top

ಆತ್ಮವಲೋಕನ ಸಭೆಯಲ್ಲಿ ಕಣ್ಣೀರಿಟ್ಟ ವಿಜಯಾನಂದ ಕಾಶಪ್ಪನವರ

ಆತ್ಮವಲೋಕನ ಸಭೆಯಲ್ಲಿ ಕಣ್ಣೀರಿಟ್ಟ ವಿಜಯಾನಂದ ಕಾಶಪ್ಪನವರ
X

ಬಾಗಲಕೋಟೆ : ರಾಜಕೀಯ ಚದುರಂಗದಾಟದಲ್ಲಿ, ಸೋಲು ಗೆಲುವು ಮಾಮೂಲಿ. ಆದ್ರೇ, ತನ್ನ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಹುನಗುಂದ ಮತಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಫಧಿ೯ಸಿ ಸೋಲು ಕಂಡ ವಿಜಯಾನಂದ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ.

ಇಂದು ಈ ಬಗ್ಗೆ ಇಳಕಲ್‌ ಪಟ್ಟಣದಲ್ಲಿ ಆತ್ಮಾವಲೋಕನ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತನ್ನ ಸೋಲಿಗೆ ಸ್ವಪಕ್ಷೀಯರೇ ಕಾರಣ. ಕಾಂಗ್ರೆಸ್‌ ನಾಯಕರು ಯಾರೂ ತಮ್ಮ ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರ ಮಾಡೋಕೆ ಬರಲಿಲ್ಲ ಎಂದು ಸಭೆಯಲ್ಲಿ ಕಣ್ಣೀರಿಟ್ಟರು...

ಇನ್ನೂ ಕಾಂಗ್ರೆಸ್‌ನ ಸ್ಟಾರ್‌ ಕ್ಯಾಂಪೇನ್‌ಗಳು ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ ಕ್ಷೇತ್ರದ ಮತದಾರರೂ ಇತರೆ ಪಕ್ಷಗಳತ್ತ ಒಲವು ತೋರಿಸುವಂತೆ ಆಯ್ತು. ಅಲ್ಲದೇ ಈ ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣರಾದರು. ಅದರಲ್ಲೂ ನನ್ನ ಸೋಲಿಗೆ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್ & ಆರ್.ಬಿ.ತಿಮ್ಮಾಪೂರ ಕಾರಣ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು.

ಇದೇ ವೇಳೆ ಪಕ್ಷದ ಅನ್ನ ಉಂಡು ಎಸ್.ಆರ್.ಪಾಟೀಲ & ಆರ್.ಬಿ.ತಿಮ್ಮಾಪೂರ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅಧಿಕಾರಕ್ಕಾಗಿ ಏನು ಮಾಡಲು ಹೇಸದ ನಾಯಕರು ಇವರು. ನಮ್ಮ ಏಳಿಗೆ ಸಹಿಸದೇ ಸೋಲಿಸಲು ಮುಂದಾಗಿದ್ದಾರೆ. ಬೆನ್ನಿಗೆ ಚೂರಿ ಹಾಕೋ ಕೆಲ್ಸ ಮಾಡಿದ್ದಾರೆ. ಧಮ್ಮ್ ಇದ್ದರೆ ಎದುರಿಗೆ ಬಂದು ಹೋರಾಡಿ ಎಂದು ಎಸ್ ಆರ್ ಪಾಟೀಲ್ ವಿರುದ್ಧ ವಿಜಯಾನಂದ ಕಾಶಪ್ಪನವರ್ ಎಂದು ಹೇಳಿದರು.

Next Story

RELATED STORIES