Top

117 ಶಾಸಕರ ಬೆಂಬಲ ಪತ್ರ ನೀಡಿದ್ದೇವೆ: ಕುಮಾರಸ್ವಾಮಿ

117 ಶಾಸಕರ ಬೆಂಬಲ ಪತ್ರ ನೀಡಿದ್ದೇವೆ: ಕುಮಾರಸ್ವಾಮಿ
X

ಸರಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲ ನಮ್ಮ ಬಳಿ ಇದ್ದು, 117 ಶಾಸಕರ ಸಹಿ ಇರುವ ಪತ್ರವನ್ನು ಸಲ್ಲಿಸಿದ್ದೇವೆ. ಕಾನೂನಿನ ಅಂಶಗಳನ್ನು ಪರಿಶೀಲಿಸಿ ಸಂವಿಧಾನದ ಪ್ರಕಾರ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬುಧವಾರ ಸಂಜೆ ರಾಜ್ಯಪಾಲ ವಾಜೂಬಾಯ್ ಪಟೇಲ್ ಅವರನ್ನು ಭೇಟಿ ಮಾಡಿದ ನಂತರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್​ ಮುಂತಾದ ಕಾಂಗ್ರೆಸ್ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಜ್ಯಪಾಲರಿಗೆ ಸರಕಾರ ರಚನೆಗೆ ಅವಕಾಶ ಕೋರಿ ಸೂಕ್ತ ಶಾಸಕರ ಬೆಂಬಲ ಪತ್ರವನ್ನು ನೀಡಿದ್ದೇವೆ. ಗೋವಾ, ಮಣಿಪುರ, ಮಿಜೋರಾಂ ಮಾದರಿಯಲ್ಲಿ ಸಮ್ಮಿಶ್ರ ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.

Next Story

RELATED STORIES