ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಕೊನೆ ಎಂದು..?

ಬೆಂಗಳೂರು : ಹುಚ್ಚಾಟಗಳಿಂದ್ಲೇ ಹುಚ್ಚ ವೆಂಕಟ್ ಅಂತ ಫೇಮಸ್ ಆದ ಈತನ ಹುಚ್ಚಾಟಗಳು ಮಿತಿಮೀರಿವೆ..ಕಳೆದ ಎರಡು ದಿನಗಳಿಂದ ನಟಿ ಐಶ್ವರ್ಯ ಜೊತೆ ಮದುವೆ ಆಗಿರೋದಾಗಿ ಹೇಳಿ ವಿಡಿಯೋವೊಂದನ್ನ ಹರಿಬಿಟ್ಟಿದ್ರು ಹುಚ್ಚಾ ವೆಂಕಟ್..ಇದಕ್ಕೆ ತಕ್ಕಂತೆ ಐಶ್ವರ್ಯ ತಾಯಿ ಕೂಡ ತನ್ನ ಮಗಳನ್ನ ತಲೆಕೆಡಿಸಿ ವೆಂಕಟ್ ಮದುವೆಯಾಗಿದ್ದಾನೆ ಅಂತ್ಲೇ ಹೇಳಿಕೆ ಕೊಟ್ಟಿದ್ರು..ಇದೆಲ್ಲಾ ನೋಡಿದ್ಮೇಲೆ ಬಹುಶಃ ಮದುವೆ ಆಗಿದ್ರೂ ಆಗಿರಬಹುದು ಅಂತ್ಲೇ ಅಲ್ರೂ ಸುಮ್ಮನಾಗಿದ್ರು.
ಇದೀಗ ಸ್ವತ: ಹುಚ್ಚ ವೆಂಕಟ್ ಹೊಸ ಕಥೆ ಶುರುಮಾಡಿಕೊಂಡಿದ್ದಾರೆ. ಹುಚ್ಚ ವೆಂಕಟ್ ನಟಿಸಿ,ನಿರ್ದೇಶಿಸಿರೋ ಡಿಕ್ಟೇಟರ್ ಹುಚ್ಚ ವೆಂಕಟ್ ಚಿತ್ರದ ನಾಯಕಿಯೇ ತನ್ನ ಪತ್ನಿ ಅಂತ ಹೇಳಿಕೊಂಡಿದ್ದ ಹುಚ್ಚ ವೆಂಕಟ್ ಇದೀಗ ನಾವಿಬ್ಬರೂ ಮದುವೆ ಆಗಿಲ್ಲ ..ಅದೆಲ್ಲಾ ಸುಳ್ಳು ಅಂತ ಮತ್ತೊಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಆ ಎಲ್ಲಾ ದೃಶ್ಯಗಳು ಕೇವಲ ಸಿನಿಮಾದಲ್ಲಿರುವುದಷ್ಟೇ..ನಾನು ಯಾವತ್ತಿಗೂ ಒಬ್ಬನೇ, ನನಗೆ ಯಾರು ಬೇಕಾಗಿಲ್ಲ ಎಂದಿದ್ದಾರೆ.
ಇದೇ ವಿಡಿಯೋದಲ್ಲಿ ಮಾತು ಮುಂದುವರಿಸಿರೋ ಹುಚ್ಚಾ ವೆಂಕಟ್ ಈ ರೀತಿ ಗಿಮಿಕ್ ಮಾಡೋದಿಕ್ಕೆ ಸ್ವತ: ಐಶ್ವರ್ಯಾಗೇ ತನಗೆ ಹೇಳಿಕೊಟ್ಟಿದ್ದು.ನನಗೆ ಗಿಮಿಕ್ ಮಾಡಲು ಇಷ್ಟವಿಲ್ಲ..ಹಾಗಾಗಿ ಎಲ್ಲರ ಮುಂದೆ ಸತ್ಯ ಒಪ್ಪಿಕೊಳ್ಳುತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ.ವೆಂಕಟ್ ಮಾತುಗಳು ರೀಲೇ ಆದ್ರೂ ರಿಯಲ್ಲೇ ಆದ್ರೂ ಹುಚ್ಚಾ ವೆಂಕಟ್ ಹುಚ್ಚಾಟ ಮಿತಿಮೀರಿರೋದಂತೂ ಸತ್ಯ.