Top

ಹಿರಿಯ ಕಲಾವಿದ ಅಕ್ಕಿ ಚೆನ್ನಬಸಪ್ಪ ಇನ್ನಿಲ್ಲ

ಹಿರಿಯ ಕಲಾವಿದ ಅಕ್ಕಿ ಚೆನ್ನಬಸಪ್ಪ ಇನ್ನಿಲ್ಲ
X

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಕಲಾಸೇವೆಗೇ ಜೀವನ ಮುಡಿಪಾಗಿಟ್ಟಿದ್ದ ಹಿರಿಯ ಕಲಾವಿದ ಅಕ್ಕಿ ಚೆನ್ನಬಸಪ್ಪ ನಿನ್ನೆ ವಿಧಿವಶರಾಗಿದ್ದಾರೆ. ಹಾಸ್ಯ ಕಲಾವಿದರಾಗಿಯೂ, ಪೋಷಕ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಇವ್ರು, 5 ವರ್ಷಗಳ ಹಿಂದೆಯೇ ತಮ್ಮ ಪತ್ನಿಯನ್ನ ಕೆಳೆದುಕೊಂಡಿದ್ರು..ಮನೆಯಲ್ಲಿ ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಕೆಂಗೇರಿ ಸಮೀಪವಿರುವ ಅನಾಥಾಶ್ರಮದಲ್ಲಿಯೇ ಆಶ್ರಯ ಪಡೆದಿದ್ದರು.

ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ಇವರು , ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ..ಕೊನೆಘಳಿಗೆವರೆಗೂ ಬಣ್ಣದ ಬದುಕಲ್ಲೇ ಮಿಂದೆದ್ದವರು..ಅಕ್ಕಿಚೆನ್ನಬಸಪ್ಪನವ್ರಿಗೆ 90 ವರ್ಷ ವಯಸ್ಸಾಗಿದ್ದು, ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಗೆ , ತಾವು ಆಶ್ರಯ ಪಡೆದಿದ್ದ ಅನಾಥಾಶ್ರಮದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಕ್ಕಿಚೆನ್ನಬಸಪ್ಪನವ್ರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದು, ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಕೆಂಗೇರಿಯ ರಾಬಿನ್​ ಥಿಯೇಟರ್​ಬಳಿ ಅಂತ್ಯಕ್ರಿಯೆ ನೆರವೇರಲಿದೆ..ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಅಕ್ಕಿಚೆನ್ನಬಸಪ್ಪನವ್ರಿಗೆ ಅಂತಿಮ ನಮನ ಸಲ್ಲಿಸಿ,ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

Next Story

RELATED STORIES