Top

ಹಾಲಿವುಡ್ ಸ್ಟೈಲ್​ನಲ್ಲಿ ಸಲ್ಲು ಸ್ಟಂಟ್ಸ್

ಹಾಲಿವುಡ್ ಸ್ಟೈಲ್​ನಲ್ಲಿ ಸಲ್ಲು ಸ್ಟಂಟ್ಸ್
X

ಬಾಲಿವುಡ್​ನ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಏನೇ ಮಾಡಿದ್ರೂ ಡಿಫರೆಂಟ್. ಭಿನ್ನ ವಿಭಿನ್ನ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನ ರಂಜಿಸ್ತಾ ಬರ್ತಿರೋ ಸಲ್ಲೂ, ಇದೀಗ ಹೊಸ ರೇಸ್ ಶುರು ಮಾಡಿದ್ದಾರೆ. ಅದೇ ರೇಸ್-3. ಹೌದು, ಇತ್ತೀಚೆಗೆ ರೇಸ್ ಸರಣಿಯ ಮೂರನೇ ಸಿನಿಮಾ ರೇಸ್-3 ಟ್ರೈಲರ್ ರಿಲೀಸ್ ಆಗಿದ್ದು, ದಬಾಂಗ್ ಬಾಯ್ ಡೇರಿಂಗ್ ಸ್ಟಂಟ್ಸ್ ನೋಡಿ ಇಡೀ ಬಿಟೌನ್ ಹುಬ್ಬೇರಿಸಿದೆ. ಹಾಲಿವುಡ್ ಶೈಲಿಯಲ್ಲಿನ ಡೇಂಜರಸ್ ಸ್ಟಂಟ್ಸ್​ನಿಂದ ಸಲ್ಲು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ.

ಬಾಲಿವುಡ್​ನ ಖ್ಯಾತ ಕ್ಯೋರಿಯೋಗ್ರಾಫರ್ ಕಮ್ ಡೈರೆಕ್ಟರ್ ರೆಮೋ ಡಿಸೋಜಾ ಕಲ್ಪನೆಯಲ್ಲಿ ಮೂರನೇ ರೇಸ್ ಮೂಡಿಬಂದಿದೆ. ಈ ಹಿಂದೆ ರೇಸ್ ಮತ್ತು ರೇಸ್-2 ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ರಮೇಶ್ ಎಸ್ ತೌರಾನಿಯೇ ಈ ಸಿನಿಮಾನೂ ನಿರ್ಮಾಣ ಮಾಡಿರೋದು ವಿಶೇಷ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಲು, ಜಾಮೀನಿನ ಮೇಲೆ ರಿಲೀಸ್ ಆದ ಬಳಿಕ ರಿಲೀಸ್ ಆಗ್ತಿರೋ ಸಿನಿಮಾ ಇದಾಗಿದ್ದು, ಅತೀವ ನಿರೀಕ್ಷೆ ಮೂಡಿಸಿದೆ. ಸಲ್ಲುಗೆ ಜೋಡಿಯಾಗಿ ಜಾಕ್ವೆಲಿನ್ ಫರ್ನಾಂಡೀಸ್ ಕಂಗೊಳಿಸಿದ್ದಾರೆ. ಜೈಹೋ ಖ್ಯಾತಿಯ ಡೈಸಿ ಶಾ ಗ್ಲಾಮರ್ ಮತ್ತೆ ಆ್ಯಕ್ಷನ್ ಖದರ್ ಇಂಪ್ರೆಸ್ಸೀವ್ ಅನಿಸಿದೆ.

ಹಿಂದಿನ ಸರಣಿಗಳಂತೆ ಈ ಬಾರಿಯೂ ರೇಸ್-3 ಬಹುತಾರಾಗಣದಿಂದ ಕೂಡಿದೆ. ಹಿರಿಯ ನಟ ಅನಿಲ್ ಕಪೂರ್, ಬಾಬಿ ಡಿಯೋಲ್ , ಸಾಕಿಬ್ ಸಲೀಮ್ ರೇಸ್ ಬಳಗದಲ್ಲಿ ಸಲ್ಲೂಗೆ ಸಾಥ್ ಕೊಟ್ಟಿದ್ದಾರೆ. ರೇಸ್-3 ಟ್ರೈಲರ್ ಯೂಟ್ಯೂಬ್​ನಲ್ಲಿ ಹಲ್​ಚಲ್ ಎಬ್ಬಿಸಿದ್ದು, ವೀಕ್ಷಕರ ಸಂಖ್ಯೆ ನಾಗಾಲೋಟದಂತೆ ಬೆಳೆಯುತ್ತಿದೆ. ಅದ್ರಲ್ಲೂ ಮೈನವಿರೇಳಿಸೋ ಅಂತಹ ಸಲ್ಲು ಸಾಹಸಗಳು ಸಿಕ್ಕಾಪಟ್ಟೆ ಥ್ರಿಲ್ ಕೊಡ್ತಿದ್ದು, ಸಿನಿಮಾ ಇದೇ ಜೂನ್ 15ಕ್ಕೆ ವರ್ಲ್ಡ್​ವೈಡ್ ರಿಲೀಸ್ ಆಗ್ತಿದೆ.

Next Story

RELATED STORIES