Top

ರಿಯಲ್ ಸ್ಟಾರ್ ಟ್ವೀಟ್ ಮರ್ಮ ಏನು..?

ರಿಯಲ್ ಸ್ಟಾರ್ ಟ್ವೀಟ್ ಮರ್ಮ ಏನು..?
X

ರಾಜ್ಯ ರಾಜಕಾರಣ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಹಿನ್ನೆಲೆಯಲ್ಲಿ ಮುಂದೆ ಯಾವ ಪಕ್ಷ ಸರ್ಕಾರ ರಚನೆ ಮಾಡುತ್ತೆ, ಯಾರು ಸಿಎಂ ಆಗ್ತಾರೆ ಅನ್ನೋದಕ್ಕೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈಗಾಗಲೇ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇದೇ ಸಮಯದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಮಾಡಿರೋ ಟ್ವೀಟ್ ಒಂದು ಕುತೂಹಲ ಕೆರಳಿಸಿದೆ.

ನಿನ್ನೆ ಬಿಜೆಪಿ ಪಕ್ಷಕ್ಕೆ ಬಹುಮತ ಖಚಿತ ಅನ್ನೋ ಸ್ಥಿತಿ ಬಂದಾಗ ಉಪೇಂದ್ರ ಟ್ವೀಟ್ ಮಾಡಿ ಬಿಜೆಪಿ ಪಕ್ಷಕ್ಕೆ ಅಭಿನಂದನೆ ತಿಳಿಸಿದ್ದರು. ಆದರೆ ರಾತ್ರಿ 8ಗಂಟೆಯ ಸುಮಾರಿಗೆ ‘ಆದದ್ದೆಲ್ಲ ಒಳಿತೇ ಆಯಿತು’ ಅಂತ ಮತ್ತೊಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿ ಉಪ್ಪಿ, Everything happens for a reason ಅಂತಲೂ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಮೊದಲಿನಿಂದಲೂ ಬಿಜೆಪಿ ಪಕ್ಷವನ್ನ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ರಿಯಲ್ ಸ್ಟಾರ್ ಬಿಜೆಪಿ ಪಕ್ಷ ಸೇರ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೆ ಅವರು ಪ್ರಜಾಕೀಯ ಶುರು ಮಾಡಿ ಬಿಜೆಪಿಯಿಂದ ದೂರ ಉಳಿದಿದ್ದರು. ಬಿಜೆಪಿಗೆ ಬಹುಮತ ಬರುತ್ತೆ ಅಂತ ಅಭಿನಂದನೆ ತಿಳಿಸಿದ್ದ ಉಪ್ಪಿ, ಕೊನೆಗೆ ಕಾರಣ ಇಲ್ಲದೇ ಏನು ನಡೆಯಲ್ಲ ಅಂತ ಮಾರ್ಮಿಕವಾಗಿ ಟ್ವೀಟ್​​​ ಮಾಡಿದ್ದಾರೆ.

Next Story

RELATED STORIES