Top

ರಾಷ್ಟ್ರಪತಿ ಮೊರೆಗೆ ಚಿಂತನೆ: ಗುಲಾಂ ನಬಿ ಆಜಾದ್

ರಾಷ್ಟ್ರಪತಿ ಮೊರೆಗೆ ಚಿಂತನೆ: ಗುಲಾಂ ನಬಿ ಆಜಾದ್
X

ಬೆಂಗಳೂರು : ಜೆಡಿಎಸ್ ಶಾಸಕಾಂಗ ಪಕ್ಷಕ್ಕೆ ಸಪೋರ್ಟ್ ಮಾಡೋಕ್ಕೆ ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷ ಹಾಗೂ ಜೆಡಿಎಸ್ ಗೆ ಗವರ್ನರ್ ಕಡೆಯಿಂದ ಯವುದೇ ಆದೇಶ ಬಂದಿಲ್ಲ. ನಾವು ರಾಜ್ಯಪಾಲರ ಆದೇಶಕ್ಕೆ ಕಾಯುತ್ತ ಇದ್ದೇವೆ.ನಾವು ಪಕ್ಷ ರಚನೆಗೆ ಬೇಕಾಗಿರೋದಕ್ಕಿಂತ ಹೆಚ್ಚು ಶಾಸಕರು ನಮ್ಮ ಜೊತೆ ಇರೋ ಬಗ್ಗೆ ನಾವು ರಾಜ್ಯಪಾಲರಿಗೆ ಪತ್ರ ನೀಡದ್ದೇವೆ ಎಂದರು.

ಬಿಜೆಪಿ ಅವರ ಬಳಿ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರಿಲ್ಲ.ಹೀಗಿರುವಾಗ ರಾಜ್ಯಪಾಲರು ನಮಗೆ ಅವಕಾಶ ನೀಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚು ನಂಬರ್ ಇರೋ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡೋದು ರಾಜ್ಯಪಾಲರ ಕರ್ತವ್ಯ. ಬಹುಮತ ಅಂದ್ರೆ ಶಾಸಕರನ್ನು ಖರೀದಿ ಮಾಡೋದಲ್ಲ. ಬಿಜೆಪಿ ಅದನ್ನು ಮಾಡ್ತಾಇದೆ. ಇದನ್ನು ರಾಜ್ಯಪಾಲರು ಒಪ್ಪೋದಿಲ್ಲ. ರಾಜ್ಯಪಾಲರು ಕಾನೂನು ಪಾಲನೆ ಮಾಡುತ್ತಾರೆಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ ಗುಲಾಂ ನಬಿ ಆಜಾದ್.

Next Story

RELATED STORIES