Top

ರಾಜ್ಯಭವನದ ಬಳಿ ಹೈಡ್ರಾಮ: ಪಕ್ಷಗಳ ಮೇಲಾಟ

ರಾಜ್ಯಭವನದ ಬಳಿ ಹೈಡ್ರಾಮ: ಪಕ್ಷಗಳ ಮೇಲಾಟ
X

ಸರಕಾರ ರಚನೆಗೆ ಪಟ್ಟು ಹಿಡಿದಿರುವ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ರಾಜ್ಯಪಾಲರ ಅನುಮತಿಗಾಗಿ ಪೈಪೋಟಿಯ ಕಸರತ್ತು ನಡೆಸಿವೆ.

ಸಂಜೆ 4 ಗಂಟೆಗೆ ರಾಜ್ಯಪಾಲ ವಾಜೂಬಾಯ್ ಪಟೇಲ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರ ಭೇಟಿಗೆ ಅವಕಾಶ ನೀಡಿದ್ದರು. ಆದರೆ ನಂತರ ಸಮಯ ಮುಂದೂಡಿದರು.

ಸಂಜೆ 5 ಗಂಟೆ ಸುಮಾರಿಗೆ ಜೆಡಿಎಸ್​ನ 38 ಹಾಗೂ ಕಾಂಗ್ರೆಸ್​ನ 78 ಶಾಸಕರು ಬಸ್​ನಲ್ಲಿ ರಾಜಭವನಕ್ಕೆ ಆಗಮಿಸಿದರು. ರಾಜ್ಯಪಾಲರ ಮುಂದೆ ಶಾಸಕರ ಪರೇಡ್ ನಡೆಸಲು ಪಕ್ಷಗಳು ಮುಂದಾದವು. ಆದರೆ ರಾಜ್ಯಪಾಲರು ಎಲ್ಲಾ ಶಾಸಕರು ರಾಜಭವನ ಪ್ರವೇಶಕ್ಕೆ ನಿರಾಕರಿಸಿದರು.

ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅಂತಿಮವಾಗಿ ಒತ್ತಡಕ್ಕೆ ಮಣಿದ ರಾಜ್ಯಪಾಲರು, ಎರಡೂ ಪಕ್ಷಗಳ ತಲಾ 10 ಶಾಸಕರಿಗೆ ಅವಕಾಶ ನೀಡಿದರು.

Next Story

RELATED STORIES