Top

ನಾಳೆ ಸಿಎಂ ಆಗಿ ಬಿಎಸ್‌ವೈ ಪ್ರಮಾಣ ವಚನ : ರಾಜ್ಯದೆಲ್ಲೆಢೆ ಕಟ್ಟೆಚ್ಚರ

ನಾಳೆ ಸಿಎಂ ಆಗಿ ಬಿಎಸ್‌ವೈ ಪ್ರಮಾಣ ವಚನ : ರಾಜ್ಯದೆಲ್ಲೆಢೆ ಕಟ್ಟೆಚ್ಚರ
X

ಬೆಂಗಳೂರು : ನಾಳೆ 9.30ಕ್ಕೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸರ್ಕಾರ ರಚಿಸಲು ಹೊರಟಿದ್ದ ಪಕ್ಷದ ನಾಯಕರಿಗೆ ಆಘಾತ ಉಂಟಾಗಲಿದೆ. ಈ ಮೂಲಕ ರಾಜ್ಯದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಲಿದೆ ಎಂದು ಗುಪ್ತಚರ ಇಲಾಖೆ, ಪೊಲೀಸರಿಗೆ ಮಾಹಿತಿ ರವಾನಿಸಿದೆ. ಈ ಕಾರಣಕ್ಕಾಗಿ, ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜುಗೊಂಡಿದೆ.

ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜರೂರಾಗಿ ಸುತ್ತೋಲೆಯ ಮೂಲಕ ಸೂಚಿಸಿದೆ. ಈ ಸುತ್ತೋಲೆಯಲ್ಲಿ ಹೀಗಿದೆ....

"ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿರುವ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ಘನವೆತ್ತ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ದಿನಾಂಕ 17.05.2018ರಂದು ಬಿಜೆಪಿ ಪಕ್ಷದ ವತಿಯಿಂದ ಸರ್ಕಾರ ರಚಿಸುವುದಾಗಿ ತಿಳಿಸಿದೆ. ಈ ಕಾರಣಕ್ಕಾಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜಭವನ, ವಿಧಾನಸೌಧ, ಅಥವಾ ಪ್ರಮಾಣ ವಚನ ಸ್ವೀಕರಿಸುವ ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಸಾಧ್ಯತೆಗಳ;ಿರುತ್ತದೆ. ಅಲ್ಲದೇ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರತಿಭಟನೆ, ಮೆರವಣಿಗೆ, ಬಂದ್, ರಸ್ತೆ ತಡೆ ನಡೆಸುವ ಸಾಧ್ಯತೆ ಇದೆ. ಜೊತೆಗೆ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರು ಹಾಗೂ ಮುಖಂಡರುಗಳ ಮನೆಯ ಮುಂದೆ ಪ್ರತಿಭಟನೆ, ಧರಣಿ, ಕಲ್ಲು ತೂರಾಟ ನಡೆಸುವ, ಗಲಾಟೆ ನಡೆಸುವ ಸಾಧ್ಯತಿಗಳಿರುವುದಾಗಿ ತಿಳಿದು ಬಂದಿರುತ್ತದೆ.

ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ" ಎಂದು ನಿರ್ದೇಶನ ನೀಡಿದೆ.

ಈ ಕಾರಣದಿಂದಾಗಿ ಬೆಂಗಳೂರು ನಗರ, ರಾಜಭವನ ಸೇರಿದಂತೆ, ಜಿಲ್ಲೆ, ತಾಲ್ಲೂಕಿನಲ್ಲಿ ಎಲ್ಲೆಲ್ಲೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ವಹಿಸಲು ಪೊಲೀಸ್ ಇಲಾಖೆ ಸಜ್ಜುಗೊಂಡಿದೆ.

Next Story

RELATED STORIES