Top

ಮೂರು ದಶಕದ  ನಂತರ ಒಂದಾದ ತಾಯಿ ಮಗ!

ಮೂರು ದಶಕದ  ನಂತರ ಒಂದಾದ ತಾಯಿ ಮಗ!
X

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶಿಶುವಾಗಿದ್ದಾಗಿಂದಲೇ ಕ್ಯಾಮರಾಗೆ ಪೋಸ್ ಕೊಟ್ಟವರು. ಒಂದು ರೀತಿಯ ಹುಟ್ಟು ಕಲಾವಿದ. ಎಲ್ಲಾ ನಟರಂತೆ ಸೋಷಿಯಲ್ ಮೀಡಿಯದಲ್ಲಿ ಸಕ್ರಿಯವಾಗಿರುವ ಅಪ್ಪು ಆಗಾಗ ತಮ್ಮ ಹಳೆಯ ಸವಿ ಸವಿ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳುತ್ತಿರುತ್ತಾರೆ. ಈಗ ಅಪ್ಪು ತಮ್ಮ 34ವರ್ಷದ ಹಳೆ ಸವಿನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ತೇಲಿಬಿಟ್ಟಿದ್ದಾರೆ.

ಹೌದು, 34 ವರ್ಷಗಳ ಹಿಂದಿನ ನೆನಪದು. ಆಗ ಅಪ್ಪುಗೆ ಕೇವಲ 9ರ ಹರೆಯ. ಮಗುವಾಗಿದಾಗಿಂದಲೇ ತಮ್ಮ ನಟನೆಯ ಚತುರತೆಯನ್ನ ತೋರಿಸಿದವರು ಪುನೀತ್ . ಬಾಲ ನಟನಾಗಿ ಬೆಟ್ಟದ ಹೂವು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಧೀರ, ದೊಡ್ಮನೆ ರಾಜಕುಮಾರ. ಈಗ ಅದೆಲ್ಲ ಇರಲಿ ನೇರವಾಗಿ ವಿಷಯಕ್ಕೆ ಬರೋಣ, 34 ವರ್ಷದ ಹಿಂದೆ ಸಾಗೋಣ.

ಬಿ.ಸರೋಜಾದೇವಿ ದಕ್ಷಿಣ ಭಾರತ ಚಿತ್ರರಂಗ ಕಂಡ ಮೇರು ನಟಿ. ಅಂದಿನ ಕಾಲದ ಟಾಪ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ ಅಭಿನೇತ್ರಿ. ಆ ಕಾಲಕ್ಕೆ ಪುನೀತ್ ಬಿ.ಸರೋಜಾದೇವಿ ಜೊತೆ ಬಣ್ಣ ಹಚ್ಚಿದ್ರು. ಯಾರಿವನು ಚಿತ್ರದಲ್ಲಿ ಸರೋಜಾದೇವಿಯವರ ಮಗನಾಗಿ ಅದ್ಭುತವಾಗಿ ನಟಿಸಿದ್ರು. ಈಗ ಮತ್ತೊಮ್ಮೆ ಸರೋಜಮ್ಮನ ಮಗನಾಗಿ ಅಪ್ಪು ಅಭಿನಯಸುತ್ತಿದ್ದಾರೆ. ಆ ಚಿತ್ರವೇ ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ.

ನಟಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಅಮ್ಮ ಮಗನ ಸೀಕ್ವಿನ್ಸ್ ಪ್ರಗತಿಯಲ್ಲಿದೆ. ಅಮ್ಮನಾಗಿ ಬಿ.ಸರೋಜಾದೇವಿ, ಮಗನಾಗಿ ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಸೇಟ್ ನಲ್ಲಿ ಬಿ.ಸರೋಜದೇವಿ ಜೊತೆ ಇರುವ ಪೋಟೋವನ್ನ ಪುನೀತ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. 34 ವರ್ಷದ ನಂತರ ಬಿ.ಸರೋಜಾದೇವಿ ಅಮ್ಮನ ಜೊತೆ ನಟಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪುನೀತ್ ಫೇಸ್ ಬುಕ್ ಪೋಸ್ಟ್ ಗೆ ಅಭಿಮಾನಿಗಳು ಫುಲ್ ಹ್ಯಾಪಿಯಾಗಿದ್ದಾರೆ.

ನಟಸಾರ್ವಭೌಮ ಚಿತ್ರದ ಶೂಟಿಂಗ್ ಅದ್ದೂರಿಯಾಗಿ ನಡೆಯುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಕಂಪ್ಲಿಟ್ಟಾಗಿ ಪೋಸ್ಟ್ ಪ್ರೋಡಕ್ಷನ್ ಕೆಲಸ ಶುರುವಾಗಲಿದೆ. ಸ್ಯಾಂಡಲ್ ವುಡ್ ತಾಜಾ ಖಬರ್​​​​​ಗಳಿಗಾಗಿ ಟಿವಿ5ಕನ್ನಡ.ಕಾಮ್ ಗೆ ಕ್ಲಿಕ್ ಮಾಡಿ.

Next Story

RELATED STORIES