Top

ಮರುಚುನಾವಣೆ ಮಾಡಬೇಕೆಂದು ಆಗ್ರಹಿಸಿದ ವಿನಯ್ ಕುಲಕರ್ಣಿ, ಕೋನರೆಡ್ಡಿ

ಮರುಚುನಾವಣೆ ಮಾಡಬೇಕೆಂದು ಆಗ್ರಹಿಸಿದ ವಿನಯ್ ಕುಲಕರ್ಣಿ, ಕೋನರೆಡ್ಡಿ
X

ಧಾರವಾಡ:ಇವಿಎಂ ಮಷಿನ್ ನಲ್ಲಿ ಗೋಲ್ ಮಾಲ್ ನಡೆದ ಅನುಮಾನವಿದೆ ಹೀಗಾಗಿ ನವಲಗುಂದದಲ್ಲಿ ಮರುಮತದಾನ ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಮತ್ತು ಕೋನರೆಡ್ಡಿ ಆಗ್ರಹಿಸಿದ್ದಾರೆ.ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿನಯ್ ಕುಲಕರ್ಣಿ, ಬಿಜೆಪಿಯವರು ಮೊದಲಿನಿಂದ ಎಷ್ಟು ಲೀಡ್ ಅಂತಾ ಹೇಳಿಕೋಳ್ತಾ ಇದ್ರೋ ಅಷ್ಟೇ ಲಿಡ್‌ಗಳು ಬಂದಿವೆ. ಇದರಿಂದ ನಮಗೂ ಅನುಮಾನಗಳು ಬಂದಿವೆ. ನಾವು ನಮ್ಮ ರಿಸಲ್ಟ್ ಬಂದಾಗಲೇ ವಿಚಾರ ಮಾಡಲಿಲ್ಲ. ಇವರು ಮಷಿನ್ ಹ್ಯಾಕ್ ಮಾಡಿದ್ದಾರೆ. ನಮ್ಮ ಸಂಶಯಗಳು ಈಗ ನಿಜಾವಾಗ್ತಿವೆ. ಇದಕ್ಕೆಲ್ಲ ಸಂಸದ ಪ್ರಲ್ಹಾದ ಜೋಶಿ ಸೂತ್ರಧಾರ. ಯಾರ್ಯಾರನ್ನು ಸೋಲಿಸಬೇಕು ಅಂತಾ ಮಾಡಿದ್ರೋ ಅವರನ್ನೆಲ್ಲಾ ಸೋಲಿಸಿದ್ದಾರೆ. ನಾನು ಸೋತಾಗ ಜನರ ತೀರ್ಪು ಅಂದುಕೊಂಡಿದ್ದೇ. ಆದರೀಗ ಅದು ಇವಿಎಂ ದುರ್ಬಳಕೆ‌ ಅಂತಾ ಗೊತ್ತಾಗ್ತಾ ಇದೆ ಈ ಹಿನ್ನೆಲೆ‌ ಮರು ಚುನಾವಣೆ ನಡೆಸಬೇಕು ಎಂದು ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಮಾತನಾಡಿದ ಎನ್.ಎನ್.ಕೋನರೆಡ್ಡಿ, ನವಲಗುಂದ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಲು ಆಗ್ರಹಿಸಿದ್ದಾರೆ.ಇವಿಎಂ ಮಷಿನ ದುರುಪಯೋಗ ಮಾಡಿಕೊಂಡಿರುವ ಗುಮಾನಿ ಇದೆ. ಹೀಗಾಗಿ ಮರು ಚುನಾವಣೆ ನಡೆಸಲು ಆಗ್ರಹ ಮಾಡುತ್ತಿದ್ದೇನೆ, ನನ್ನ ಕ್ಷೇತ್ರದಲ್ಲಿ 127 ಮತಗಳ ಅಂತರ ಬಂದಿದೆ. ಈ ಹಿನ್ನೆಲೆ ಮರು ಚುನಾವಣೆ ನಡೆಸಲು ಒತ್ತಾಯಿಸಿದ್ದೇನೆ ಎಂದು ಚುನಾವಣಾಧಿಕಾರಿಗಳಿಗೆ ಕೋನರೆಡ್ಡಿ ದೂರು ಸಲ್ಲಿಸಿದ್ದಾರೆ.

ಬ್ಯಾಲೆಟ್ ಪೆಪರ್ ಅಡಿ ಎಲೆಕ್ಷನ್ ನಡಿಸಬೇಕು. 20 ಸಾವಿರ್ ಲೀಡ್ ಆಗೋಕೆ ಸಾಧ್ಯವೆ ಇಲ್ಲ. ಈ ಮಷಿನಗಳು ರಾಜ್ಯಸ್ಥಾನ, ಗುಜರಾತದಿಂದ ಬಂದಿರೊದ್ರಿಂದ ನಮಗೆ ಅನುಮಾನಗಳು ಬರ್ತಿವೆ. ಇವರು ಮೊದಲೇ ಒಂದಷ್ಟು ಮತ ಪೀಡ್ ಮಾಡಿ ಇಟ್ಟಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳಿಗೆ, ಕೇಂದ್ರ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದೇನೆ. 20 ಸಾವಿರ ಲೀಡ್‌ನಿಂದ ಅಂತಾ ಹೇಳಿಕೊಂಡವರೆಲ್ಲ 20 ಸಾವಿರಕ್ಕಿಂತ ಲೀಡ್‌ನಲ್ಲಿ ಬಂದಿರೋದು ಅನುಮಾನಗಳಿಗೆ ಕಾರಣವಾಗಿವೆ ಎಂದು ದೂರು ನೀಡಿದ್ದಾರೆ.

Next Story

RELATED STORIES