Top

ಮಂಗಳೂರು ಚೆಲುವೆ ಚೆಲುವನೊಂದಿಗೆ ಮೇಷ್ಟ್ರು ಹೊಸ ಸಿನಿಮಾ

ಮಂಗಳೂರು ಚೆಲುವೆ ಚೆಲುವನೊಂದಿಗೆ ಮೇಷ್ಟ್ರು ಹೊಸ ಸಿನಿಮಾ
X

ಅಮೆರಿಕಾ ಅಮೆರಿಕಾದಂತ ಸಿನಿಮಾ ಸೂಪರ್ ಹಿಟ್ ಚಿತ್ರ ನೀಡಿದ ಸ್ಟಾರ್ ನಿರ್ದೇಶಕ ಹಾಗೂ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ನಿರ್ಧರಿಸಿದ್ಧಾರೆ.

ಬೆಂಗಳೂರು ಮತ್ತು ಇಂಗ್ಲೆಂಡ್ ನಡುವೆ ಕಥೆ ಇದಾಗಿದ್ದು, ಫಸ್ಟ್​ ರ್ಯಾಂಕ್​ ರಾಜು ಖ್ಯಾತಿಯ ಗುರುನಂದನ್ ಮತ್ತು ಟಗರು ಖ್ಯಾತಿಯ ಮಾನ್ವಿತಾ ಹರೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಚಿತ್ರದ ಹೆಸರು ಇನ್ನೂ ಅಂತಿಮಗೊಂಡಿಲ್ಲ ಆದರೆ ಶೀಘ್ರವೇ ಅದನ್ನು ಕೂಡ ಪ್ರಕಟಿಸುವುದಾಗಿ ತಿಳಿಸಿದ್ದಾರೆ ಮೇಷ್ಟ್ರು. ಅಮೆರಿಕಾ ಅಮೆರಿಕಾದಂತ ಸಿನಿಮಾವನ್ನು ಮತ್ತೆ ತರಲು ಯೋಜಿಸಲಾಗುತ್ತಿದೆ, ಆದ್ರೆ ಈ ಚಿತ್ರಕ್ಕು ಆ ಚಿತ್ರಕ್ಕು ಯಾವುದೇ ಹೋಲಿಕೆಯಿಲ್ಲ, ಕತೆ ಮಾತ್ರ ಅದೇ ಸಾಲುಗಳಂತೆ ಇರುತ್ತದೆ ಎಂದು ಹೇಳಿರುವ ನಾಗತಿಹಳ್ಳಿ ಸೂಕ್ತ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದಾರೆ.

ಇಂಗ್ಲೆಂಡ್​ನ ವೇಲ್ಸ್, ಸ್ಕಾಟ್ಲೆಂಡ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಶೂಟಿಂಗ್ ನಡೆಯಲಿದೆ. ವಿಶೇಷ ಅಂದ್ರೆ ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಕನಸು ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಜುಲೈ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್ ಮಾಡಲು ನಾಗತಿಹಳ್ಳಿ ಚಂದ್ರಶೇಖರ್​ ನಿರ್ಧರಿಸಿದ್ದಾರೆ, ಮೊದಲ ಭಾಗ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು, ಚಳಿಗಾಲ ಆರಂಭವಾಗುವ ಮುನ್ನ ಶೂಟಿಂಗ್ ಪೂರ್ಣಗೊಳಿಸಬೇಕು. ಹೊರ ದೇಶಗಳ ಚಿತ್ರವನ್ನು ಆಗಸ್ಟ್ ತಿಂಗಳ ಒಳಗೆ ಮುಗಿಸುವುದಾಗಿ ನಿರ್ಧರಿಸಿದ್ಧಾರೆ. ಇನ್ನು ಚಿತ್ರಕ್ಕೆ ಇಷ್ಟಕಾಮ್ಯ ಚಿತ್ರದ ನಿರ್ಮಾಪಕ ವೈ.ಎನ್ ಶಂಕರೇಗೌಡ ಈ ಸಿನಿಮಾ ಬಂಡವಾಳ ಹಾಕಲಿದ್ಧಾರೆ.

Next Story

RELATED STORIES