Top

ಬಿಜೆಪಿ ಸರ್ಕಾರ ರಚನೆಗೆ ಅವಕಾಶ : ಕೈ-ಜೆಡಿಎಸ್ ಪ್ರತಿಭಟನೆಯ ನಿರ್ಧಾರ

ಬೆಂಗಳೂರು : ಕರ್ನಾಟಕ ರಾಜ್ಯಕಾರಣದ ಚದುರಂಗದಾಟ ನಿನ್ನೆಯ ಅತಂತ್ರ ಫಲಿತಾಂಶದ ಮೂಲಕ ಶುರುವಾಗಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನಂಬರ್ ಒನ್ ಆಗಿದ್ದರೇ, ಆಡಳಿತಾರೂಢ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಇನ್ನೂ ಪ್ರಾದೇಶಿಕ ಪಕ್ಷ ಮೂರನೇ ಸ್ಥಾನದಲ್ಲಿದ್ದು, ಕಿಂಗ್ ಮೇಕರ್ ಆಗುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ.

ಇದೀಗ ಕಳೆದ ನಿನ್ನೆಯಿಂದ ರಾಜ್ಯಪಾಲರ ಅಂಗಳದಲ್ಲಿದ್ದ ಯಾರ್ ಆಗ್ತಾರೆ ಸಿಎಂ ಎಂಬ ಪ್ರಶ್ನೆಗೆ, ತೆರೆಬಿದ್ದಿದೆ. ನಾಳೆ ಬಹುಮತವಿದೆ ಎಂದು ಸರ್ಕಾರ ರಚಿಸಲು ಬಿಜೆಪಿ ಮಂಡನೆಗೆ, ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಸಿಎಂ ಆಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ಪೀಕರಿಸಲಿದ್ದಾರಂತೆ.

ಈ ಎಲ್ಲಾ ಬೆಳವಣಿಗೆಯ ನಡುವೆ, ಈಗ ಸರ್ಕಾರ ರಚನೆಗೆ ಹೊರಟ ಬಿಜೆಪಿಗೆ, ಸರ್ಕಾರ ರಚಿಸಲು ಅನುಮತಿಕೊಟ್ಟ ರಾಜ್ಯಪಾಲರಿಗೆ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಪ್ರತಿಭಟನೆಯ ಬಿಸಿ ಮುಟ್ಟಲಿದೆಯಂತೆ. ನಾಳೆ ಬಿಜೆಪಿ ಸರ್ಕಾರ ರಚನೆಗೆ ತೊಡಗಿದರೇ, ರಾಜ್ಯಾಧ್ಯಂತ ಕೈ, ಜೆಡಿಎಸ್ ಪಕ್ಷದ ನಾಯಕರು ಪ್ರತಿಭಟನೆಯನ್ನು ನಡೆಸಲಿದ್ದಾರಂತೆ. ಈ ಕುರಿತು ಈಗಾಗಲೇ ಎರಡು ಪಕ್ಷದ ವರಿಷ್ಠರು ಸಜ್ಜುಗೊಂಡಿದ್ದಾರೆ ಎಂಬ ಮಾಹಿತಿ ಕೂಡ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಒಂದೆಡೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎನ್ನುತ್ತಾ ಅಧಿಕಾರದ ಗದ್ದುಗೆ ಏರತೊಡಗಿದ್ರೇ, ಮತ್ತೊಂದೆಡೆ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೊರಟ ಕೈ-ತೆನೆಹೊತ್ತ ಮಹಿಳೆಯರ ಪ್ರತಿಭಟನೆಯ ಬಿಸಿ ಎದುರಿಸಬೇಕಿದೆ.

Next Story

RELATED STORIES