Top

ಬಿಎಸ್‌ವೈ ಪ್ರಮಾಣ ವಚನಕ್ಕೆ ರಮ್ಯ ಟ್ವಿಟ್ ಗೊಂದಲ

ಬಿಎಸ್‌ವೈ ಪ್ರಮಾಣ ವಚನಕ್ಕೆ ರಮ್ಯ ಟ್ವಿಟ್ ಗೊಂದಲ
X

ಬೆಂಗಳೂರು : ಕ್ಷಣ, ಕ್ಷಣಕ್ಕೂ, ರಾಜ್ಯದ ರಾಜಕೀಯ ಚದುರಂಗದಾಟ ತಲುಪುತ್ತಿದೆ. ಬಿ ಎಸ್ ಯಡಿಯೂರಪ್ಪ ನಾಳೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಗುರುವಾರ 9.30ಕ್ಕೆ ರಾಜಭವನದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂತಸ ಗಳಿಗೆಯಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಎಂದು ಬಿಜೆಪಿಯ ಸುರೇಶ್ ಕುಮಾರ್ ಟ್ವಿಟ್ ಮಾಡಿದ್ದರು.

ಈ ಟ್ವಿಟ್‌ನಿಂದ ರಾಜ್ಯದಲ್ಲಿ ಸಿ ಎಂ ಆಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳೋದು ಖಚಿತಾಯ್ತು ಎಂದೇ ಎಲ್ಲರೂ ನಂಬಿದ್ದರು. ಈ ಬಗ್ಗೆ ರಮ್ಯ ಬಿಜೆಪಿಯವರಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಬಿಎಸ್‌ವೈ ಪ್ರಮಾಣ ವಚನಕ್ಕೆ ಟ್ವಿಟರ್ ಗೊಂದಲದ ತೆರೆಯನ್ನು ತಂದಿಟ್ಟಿದ್ದಾರೆ.

ರಮ್ಯ 8.42ಕ್ಕೆ ಟ್ವಿಟ್ ಮಾಡಿದ್ದು, ಬಿಎಸ್‌ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ನಾಳೆ 9.30ಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸೋದು ಕುಮಾರಸ್ವಾಮಿ ಎಂದು ಟ್ವಿಟ್ ಮಾಡಿದ್ದಾರೆ. ರಮ್ಯ ಮಾಡಿರುವ ಟ್ವಿಟರ್ ಟಾಂಗ್, ಈಗ ಕುತೂಹಲ ಕೆರಳಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ನಾಳೆ ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ಗೊಂದಲ ಸೃಷ್ಠಿಸಿದೆ.

Next Story

RELATED STORIES