Top

ನಾಳೆ 9.30ಕ್ಕೆ ಬಿಎಸ್‌ವೈ ಸಿಎಂ ಆಗಿ ಪ್ರಮಾಣವಚನ

ನಾಳೆ 9.30ಕ್ಕೆ ಬಿಎಸ್‌ವೈ ಸಿಎಂ ಆಗಿ ಪ್ರಮಾಣವಚನ
X

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ವಿದ್ಯಾಮಾನ ಶುರುವಾಗಿದೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಎರಡು ಪಕ್ಷಗಳು ಸಿದ್ದಗೊಂಡಿದ್ದವು. ಈ ಬೆಳವಣಿಗೆಯ ನಡುವೆಯೂ, ರಾಜ್ಯಪಾಲರಾದ ವಜುಬಾಯ್ ರೂಢಬಾಯ್ ವಾಲಾ, ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾದ ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಹಿನ್ನಲೆಯಲ್ಲಿ ಬಿಜೆಪಿ ಎಲ್ಲಾ ರೀತಿಯ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ನಾಳೆ 9.30ಕ್ಕೆ ರಾಜಭವನದಲ್ಲಿ, ಸಿಎಂ ಆಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಈ ಸಮಾರಂಭ ನಡೆಯಲಿದ್ದು, ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

Next Story

RELATED STORIES