Top

ಆಪರೇಷನ್ v/s ಅಪರೇಷನ್​: ಅಧಿಕಾರಕ್ಕಾಗಿ ಹರಸಾಹಸ

ಪೂರ್ಣ ಬಹುಮತ ಬಾರದ ಹಿನ್ನೆಲೆಯಲ್ಲಿ ಸರಕಾರ ರಚನೆಯ ಕಸರತ್ತು ತೀವ್ರಗೊಳ್ಳುತ್ತಿದೆ. ಮ್ಯಾಜಿಕ್ ನಂಬರ್ ಪಡೆಯಲು ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡ ಆಪರೇಷನ್ ಹಸ್ತ ಆರಂಭಿಸಿದೆ.

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್​ಗೆ ಹೋದ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರನ್ನು ತವರು ಪಕ್ಷಕ್ಕೆ ಕರೆತರಲು ಮಾತುಕತೆ ನಡೆದಿದೆ. ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜೆಡಿಎಸ್​ನ ಜಿ.ಟಿ.ದೇವೇಗೌಡ ಅವರನ್ನೂ ಬಿಜೆಪಿ ಮುಖಂಡರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕಾಂಗ್ರೆಸ್​ನ 10 ಶಾಸಕರ ಖರೀದಿಗೆ ಬಿಜೆಪಿ ತೆರೆಮರೆಯ ಕಸರತ್ತು ತೀವ್ರಗೊಳಿಸಿದೆ.

ಬಿಜೆಪಿ ರಾಷ್ಟ್ರೀಯ ಮುಖಂಡರಾದ ಜಾವ್ಡೆಕರ್​, ದೇವೇಂದ್ರ ಪ್ರಧಾನ್​ ಅವರನ್ನೊಳಗೊಂಡ ಮೂರು ತಂಡ ಬೆಂಗಳೂರಿಗೆ ಆಗಮಿಸಿದ್ದು, ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಸರಕಾರ ರಚನೆಗೆ ಬೆಂಬಲ ನೀಡುವಂತೆ ಕೋರಿದೆ.

ಜೆಡಿಎಸ್​ ಹಾಗೂ ಕಾಂಗ್ರೆಸ್ ಶಾಸಕರು ಬಿಡದಿಯ ರೆಸಾರ್ಟ್​ನಲ್ಲಿ ತಂಗಲು ನಿರ್ಧರಿಸಿದ್ದಾರೆ. ಇದೇ ವೇಳೆ ಎರಡೂ ಪಕ್ಷಗಳ ಶಾಸಕರ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ನೀಡಿರುವ ಬಿಜೆಪಿ- ಕಾಂಗ್ರೆಸ್ ಸರಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದೆ. ಜೆಡಿಎಸ್​ನಿಂದ ಕಾಂಗ್ರೆಸ್​ಗೆ ವಲಸೆ ಹೋದ ಜಮೀರ್ ಅಹ್ಮದ್ ಖಾನ್ ತಮ್ಮ ಬಸ್​ನಲ್ಲಿ ಶಾಸಕರನ್ನು ಕರೆದೊಯ್ದರು. ಸ್ವತಃ ಬಸ್ ಚಾಲಕನ ಆಸನದಲ್ಲಿ ಜಮೀರ್ ಕೂತಿದ್ದು, ಈ ಹಿಂದೆ ಬಿಜೆಪಿ ಜೊತೆ ರೆಸಾರ್ಟ್​ ರಾಜಕೀಯ ಆರಂಭದ ವೇಳೆಯ ಘಟನೆಯನ್ನು ನೆನಪಿಸಿದರು.

ಇದೇ ವೇಳೆ ಕಾಂಗ್ರೆಸ್ ಕೂಡ ಆಪರೇಷನ್ ಹಸ್ತ ಆರಂಭಿಸುವ ಮೂಲಕ ತಿರುಗೇಟು ನೀಡಲು ನಿರ್ಧರಿಸಿದೆ. ಈ ಸಂಬಂಧ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಿಂದ ಬಿಜೆಪಿಗೆ ಹೋಗಿದ್ದ ಸುಮಾರು 8ರಿಂದ 10 ಶಾಸಕರನ್ನು ಸಂಪರ್ಕಿಸಿದೆ. ಆಪರೇಷನ್ ಕಮಲದ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

Next Story

RELATED STORIES