Top

ಸರಕಾರ ರಚನೆಗೆ ಕೈ ಜೋಡಿಸಲು ಒಪ್ಪಿದ ಕುಮಾರಸ್ವಾಮಿ

ಸರಕಾರ ರಚನೆಗೆ ಕೈ ಜೋಡಿಸಲು ಒಪ್ಪಿದ ಕುಮಾರಸ್ವಾಮಿ
X

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಮೈತ್ರಿ ಸರಕಾರ ರಚಿಸಲು ಸಮ್ಮತಿಸಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಯ ಪ್ರಸ್ತಾಪ ಸಲ್ಲಿಸಲಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ನೀಡಿದ ಬೆಂಬಲಕ್ಕೆ ಕುಮಾರಸ್ವಾಮಿ ಸಹಮತ ಸೂಚಿಸಿದರು. ಸೋಮವಾರ ಸಂಜೆ ತಂದೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಸರಕಾರ ರಚನೆಗೆ ಒಪ್ಪಿಗೆ ಸೂಚಿಸಿದರು.

ಇದೇ ವೇಳೆ ಸರಕಾರ ರಚನೆಯ ಪ್ರಸ್ತಾಪ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲ ಕುರಿತು ರಾಜ್ಯಪಾಲರಿಗೆ ಸಲ್ಲಿಸಲಿದ್ದ ಪ್ರಸ್ತಾಪದ ಪತ್ರ ಟಿವಿ5ಗೆ ಲಭಿಸಿದೆ.

Next Story

RELATED STORIES