Top

ವಿದರ್ಭ ಎಕ್ಸ್ ಪ್ರೆಸ್‍ಗೆ ಬೆದರಿದ ಪಂಜಾಬ್ ಕಿಂಗ್ಸ್

ವಿದರ್ಭ ಎಕ್ಸ್ ಪ್ರೆಸ್‍ಗೆ ಬೆದರಿದ ಪಂಜಾಬ್ ಕಿಂಗ್ಸ್
X

ಇಂದೋರ್: ಪೇಸರ್ ಉಮೇಶ್ ಯಾದವ್ ದಾಳಿಯ ನೆರವಿನಿಂದ ಆರ್ಸಿಬಿ ತಂಡ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿತು.

ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ವಿದರ್ಭ ಎಕ್ಸ್‍ಪ್ರೆಸ್ ಉಮೇಶ್ ಯಾದವ್ ದಾಳಿಗೆ ತತ್ತರಿಸಿ ಹೋಯಿತು. ಮೊದಲ ವಿಕೆಟ್‍ಗೆ ಕೆ.ಎಲ್. ರಾಹುಲ್ ಮತ್ತು ಕ್ರಿಸ್ ಗೇಲ್ 36 ರನ್‍ಗಳ ಉತ್ತಮ ಆರಂಭ ನೀಡಿದ ಹೊರತಾಗಿಯೂ ಆರ್‍ಸಿಬಿ ದಾಳಿಗೆ ಕಕ್ಕಾಬಿಕ್ಕಿ ಆಯ್ತು. ಮಧ್ಯಮ ಕ್ರಮಾಂಕದಲ್ಲಿ ಏರಾನ್ ಫಿಂಚ್ 26 ರನ್ ಬಾರಿಸಿದ್ದು ಬಿಟ್ಟರೆ ತಂಡದ ಎಲ್ಲ ಬ್ಯಾಟ್ಸ್ ಮನ್‍ಗಳು ಒಂದಂಕಿ ರನ್ ಬಾರಿಸಿ ಪೆವಿಲಿಯನ್ ಸೇರಿದ್ರು. ಅಶ್ವಿನ್ ಪಡೆ 15.1 ಓವರ್ ವೇಳೆಗೆ 88 ರನ್‍ಗೆ ಆಲೌಟ್ ಆಯಿತು. ವೇಗಿ ಉಮೇಶ್ ಯಾದವ್ 3 ವಿಕೆಟ್ ಪಡೆದ್ರು.ಇದರೊಂದಿಗೆ ಐಪಿಎಲ್‍ನಲ್ಲಿ ಪಂಜಾಬ್ ನಾಲ್ಕನೆ ಬಾರಿಗೆ ಕಡಿಮೆ ಮೊತ್ತ ಗಳಿಸಿದ ದಾಖಲೆ ಬರೆಯಿತು. ಸುಲಭ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಅಜೇಯ 48 ಮತ್ತು ಪಾರ್ಥೀವ್ ಪಟೇಲ್ ಅಜೇಯ40 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

Next Story

RELATED STORIES