Top

ರಾಜ್ಯಪಾಲರ ಅಂಗಳದಲ್ಲಿ ಸರಕಾರಿ ಚೆಂಡು: ಆಪರೇಷನ್ ಕಮಲ?

ರಾಜ್ಯಪಾಲರ ಅಂಗಳದಲ್ಲಿ ಸರಕಾರಿ ಚೆಂಡು: ಆಪರೇಷನ್ ಕಮಲ?
X

ಪ್ರಸಕ್ತ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮದು ಅತೀ ದೊಡ್ಡ ಪಕ್ಷ ಎಂದು ಬಿಜೆಪಿ ಹೇಳಿಕೊಂಡರೆ, ಸಂಖ್ಯಾಬಲದಲ್ಲಿ ನಾವಿದ್ದೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೆಕ್ಕಕೊಟ್ಟಿವೆ. ಸರಕಾರ ರಚನೆಗೆ ಎರಡೂ ಪಕ್ಷಗಳು ಮಾಡಿರುವ ಮನವಿಯನ್ನು ಸ್ವೀಕರಿಸಿರುವ ರಾಜ್ಯಪಾಲರು ತಮ್ಮ ತೀರ್ಮಾನವನ್ನು ಕಾಯ್ದಿರಿಸಿದ್ದಾರೆ. ಇದರಿಂದ ಹೊಸ ಸರಕಾರ ರಚನೆಯ ಚೆಂಡು ರಾಜ್ಯಪಾಲರ ಅಂಗಳದಲ್ಲಿ ಬಂದು ಬಿದ್ದಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ರಾಜ್ಯಪಾಲ ವಾಜೂಭಾಯ್ ಪಟೇಲ್ ಅವರನ್ನು ಭೇಟಿ ಮಾಡಲು ದೌಡಾಯಿಸಿದರು. ನಮ್ಮದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ದರಿಂದ ಸರಕಾರ ರಚನೆಗೆ ಅವಕಾಶ ಮಾಡಿಕೊಡಿ. 7 ದಿನಗಳ ಅವಕಾಶ ನೀಡದರೆ ವಿಶ್ವಾಸಮತ ಸಾಬೀತುಪಡಿಸುವೆ ಎಂದು ಮನವಿ ಮಾಡಿದರು.

ನಂತರ ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಭೇಟಿ ಮಾಡಿ ಸಂಖ್ಯಾಬಲದಲ್ಲಿ ನಾವಿದ್ದೇವೆ. ಹಾಗಾಗಿ ನಮಗೆ ಸರಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲವಷ್ಟೇ ಮುಖ್ಯ. ಪಕ್ಷವಲ್ಲ. ಜೆಡಿಎಸ್ ಸರಕಾರ ರಚನೆಗೆ ನಾವು ಬೆಂಬಲ ನೀಡುತ್ತಿದ್ದೇವೆ. ಉಳಿದ ವಿಷಯಗಳ ಕುರಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

Next Story

RELATED STORIES