Top

ಮೈತ್ರಿಗಾಗಿ ರಣತಂತ್ರ

ಮೈತ್ರಿಗಾಗಿ ರಣತಂತ್ರ
X

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆ, ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿದೆ. ಯಾರ ಜೊತೆಗೂ ಮೈತ್ರಿ ಇಲ್ಲವೆಂದ ಮೂರು ಪಕ್ಷಗಳು ಮೈತ್ರಿಗಾಗಿ ಗುದ್ದಾಟ ನಡೆಸಿದೆ.ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿಯವರಿಗೆ ನಾನು ನಿಮ್ಮನ್ನೇ ಸಿಎಂ ಮಾಡುತ್ತೇವೆ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಿ ಎಂದರೆ, ಬಿಜೆಪಿ ಹೈಕಮಾಂಡ್ ನಾವು ನಿಮ್ಮನ್ನೇ ಸಿಎಂ ಮಾಡುತ್ತೇವೆ ನಮ್ಮ ಜೊತೆ ಮೈತ್ರಿ ಮಾಡಿ ಎಂದು ಪಟ್ಟು ಹಿಡಿದಿದೆ.ಹೀಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾದ ಜೆಡಿಎಸ್, ಕೊಂಚ ಹೊತ್ತು ಸಮಯ ಕೇಳಿ ಎಲ್ಲ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದೆ. ಈ ಬೆನ್ನಲ್ಲೇ 7ಮಂದಿ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ.ಕಾಂಗ್ರೆಸ್ ನ ಲಿಂಗಾಯಿತ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದು, ಆಪರೇಶನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ.ಅಮಿತ್ ಶಾ ಪ್ರತಿತಂತ್ರ ಇಲ್ಲಿ ನಡೆದ್ರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋ ಸಾಧ್ಯತೆ ಇದೆ.

Next Story

RELATED STORIES