Top

ಬಾದಾಮಿಯಲ್ಲಿ ಸೋಲು ಹಿನ್ನೆಲೆ ಕಣ್ಣೀರಿಟ್ಟ ಶ್ರೀರಾಮುಲು

ಬಾದಾಮಿಯಲ್ಲಿ ಸೋಲು ಹಿನ್ನೆಲೆ ಕಣ್ಣೀರಿಟ್ಟ ಶ್ರೀರಾಮುಲು
X

ಬಾದಾಮಿಯಲ್ಲಿ ಸೋಲನುಭವಿಸಿದ್ದಕ್ಕೆ ಶ್ರೀರಾಮುಲು ಭಾವುಕರಾಗಿದ್ದಾರೆ.ಶ್ರೀರಾಮುಲು ಮತ್ತು ಎಂ.ಕೆ.ಪಟ್ಟಣಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕೇಂದ್ರಕ್ಕೆ ಬಂದ ಶ್ರೀರಾಮುಲು ಕಣ್ಣೀರಿಟ್ಟಿದ್ದಾರೆ.ಈ ವೇಳೆ ಮಾತನಾಡಿದ ಅವರು, ಬಾದಾಮಿಯಲ್ಲಿ ಸಿದ್ದರಾಮಯ್ಯರ ಗೆಲುವು ಗೆಲುವಲ್ಲ.ನೈತಿಕವಾಗಿ ಗೆಲುವು ನನ್ನದೇ ಆಗಿದೆ. ನನ್ನ ಸೋಲಿಗೆ ಜೆಡಿಎಸ್ ಹೆಚ್ಚು ಮತ ತೆಗೆದುಕೊಂಡಿದ್ದೇ ಕಾರಣ.ಜೆಡಿಎಸ್ ಅಭ್ಯರ್ಥಿ ಬಾದಾಮಿಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಬಾದಾಮಿಯಿಂದ ನಾನು ಗೆಲ್ಲಬೇಕೆಂಬ ಆಸೆಯಿತ್ತು. ಸೋತಿರೋದಕ್ಕೆ ಭಾವುಕನಾದೆ. ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ನಾನು ಬಾದಾಮಿಯಲ್ಲಿ ಸೋಲನ್ನು ಕಂಡರೂ, ಆಗಾಗ ಬಾದಾಮಿಗೆ ಬಂದು ಹೋಗುವೆ ಎಂದು ಹೇಳಿದರು.

Next Story

RELATED STORIES