Top

ದೇವರ ಮೊರೆಹೋದ ರಾಜಕಾರಣಿಗಳು

ದೇವರ ಮೊರೆಹೋದ ರಾಜಕಾರಣಿಗಳು
X

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು, ಇಂದು ಫಲಿತಾಂಶಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಭ್ಯರ್ಥಿಗಳೆಲ್ಲ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇಂಥದರಲ್ಲಿ ಗೆಲುವು ನಮ್ಮದಾಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಯ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿದ ಹೆಚ್ಡಿಕೆ, ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವೆಂದರೆ ದೊಡ್ಡಗೌಡರ ಕುಟುಂಬ ಪ್ರತಿ ಅಮವಾಸ್ಯೆಗೂ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸುತ್ತೆ. ಇಂದು ಕೂಡ ಅಮವಾಸ್ಯೆಯಾಗಿರುವುದರಿಂದ ಹೆಚ್ಡಿಕೆ ದಂಪತಿ ಕಾಲಭೈರವನಿಗೆ ಪೂಜೆ ಸಲ್ಲಿಸಿದ್ದಾರೆ.

ಇನ್ನೊಂದೆಡೆ ಚಾಮುಂಡೇಶ್ವರಿ ಕ್ಷೇತ್ರವನ್ನು ಗೆಲ್ಲಲು ಜಿ.ಟಿ.ದೇವೇಗೌಡರು, ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ.ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಜಿಟಿಡಿ, ನಾಡ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬಸ್ಥರ ಜೊತೆಗೆ ಪೂಜೆಯಲ್ಲಿ ಭಾಗಿಯಾದ ಜಿಟಿಡಿ, ಈಶ್ವರ ದೇವಾಲಯಕ್ಕೂ ಭೇಟಿ ನೀಡಿ, ಗೆಲುವು ತಮ್ಮದಾಗಲೆಂದು ಪ್ರಾರ್ಥಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ ಗೆಲುವಿನ ನಗೆ ಬೀರಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಮತ್ತು ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ದೇವಿಯ ಮೊರೆ ಹೋಗಿದ್ದಾರೆ. ಇಬ್ಬರು ಕೂಡ ಕರೆಮ್ಮದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ನಾನೇ ಈ ಬಾರಿ ಸಿಎಂ ಎಂದು ಆತ್ಮವಿಶ್ವಾಸದಲ್ಲಿರುವ ಬಿಎಸ್ ವೈ ನಿವಾಸಕ್ಕೆ ಯಡಿಯೂರಿನಿಂದ ಅರ್ಚಕರು ಬಂದು ಪ್ರಸಾದ ನೀಡಿದ್ದಾರೆ. ಯಡಿಯೂರು ಸಿದ್ಧಲಿಂಗೇಶ್ವರ ಬಿಎಸ್ ವೈ ಮನೆ ದೇವರಾಗಿದ್ದು. ವಿಶೇಷ ಪೂಜೆ ಸಲ್ಲಿಸಿ, ಯಡಿಯೂರಪ್ಪಗೆ ಪ್ರಸಾದ ತಂದ ಅರ್ಚಕ ಸಿದ್ಧಲಿಂಗ ಪ್ರಭು, ಯಡಿಯೂರಪ್ಪ ಸಿಎಂ ಆಗ್ತಾರೆ, ಬಿಜೆಪಿಗೆ ೧೨೦ ಸ್ಥಾನ ಬಂದೇ ಬರುತ್ತೆ , ಬಿಎಸ್ ವೈ ಸಿಎಂ ಆಗಲಿ ಅಂತಾ ವಿಶೇಷ ಪೂಜೆ ಮಾಡಿ ಪ್ರಸಾದ ಕೊಡಲು ಬಂದಿದ್ದೇ ಎಂದರು.

ಹಾಸನದ ಹೊಳೆನರಸಿಪುರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ನಾಗಪ್ಪನ ಮೊರೆಹೋಗಿದ್ದಾರೆ. ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ ಎಸ್ ಪಾಟೀಲ್ ಶಕ್ತಿ ದೇವರು ಯಲಗೂರು ಮಾರುತಿ ದೇವರ ಮೊರೆ ಹೋಗಿದ್ದಾರೆ.

Next Story

RELATED STORIES