Top

ಕೈ ಕೊಟ್ಟ ಚಾಮುಂಡಿ, ಬಾದಾಮಿ ಸವಿದ ಸಿದ್ದರಾಮಯ್ಯ

ಕೈ ಕೊಟ್ಟ ಚಾಮುಂಡಿ, ಬಾದಾಮಿ ಸವಿದ ಸಿದ್ದರಾಮಯ್ಯ
X

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ವಿರುದ್ಧ ಸೋಲುಂಡರೆ, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಗೆಲುವು ಕಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವೃತ್ತಿಜೀವನದ ಕೊನೆಯ ಚುನಾವಣಾ ರಾಜಕೀಯದಲ್ಲಿ ಸೋಲು-ಗೆಲುವಿನ ಮಿಶ್ರ ಫಲಿತಾಂಶ ಪಡೆದಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದ್ದ ಸಿದ್ದರಾಮಯ್ಯ, ಕೊನೆಯ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲು ಬಯಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ವಿರುದ್ಧ 28ಸಾವಿರಕ್ಕೂ ಅಧಿಕ ಮತಗಳ ಭಾರೀ ಅಂತರದಿಂದ ಸೋಲುಂಡರು.

ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಕೊನೆಯ ಹಂತದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದುರ. ನಿರೀಕ್ಷೆಯಂತೆ ಲಿಂಗಾಯತ ಮತಗಳು ಅವರನ್ನು ಕೈಬಿಡಲಿಲ್ಲ. ಅಂತಿಮವಾಗಿ ಸಿದ್ದರಾಮಯ್ಯ 2000 ಮತಗಳಿಂದ ಶ್ರೀರಾಮುಲು ಅವರನ್ನು ಮಣಿಸಿದರು.

Next Story

RELATED STORIES