Top

ಕೈಕೊಟ್ಟ ಮತದಾರ: ಸಚಿವರಿಗೆ ಮುಖಭಂಗ

ಕೈಕೊಟ್ಟ ಮತದಾರ: ಸಚಿವರಿಗೆ ಮುಖಭಂಗ
X

ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದ ಬಹುತೇಕ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಇದರೊಂದಿಗೆ ಕ್ಷೇತ್ರದ ಜನತೆ ಪ್ರಬಲ ಮುಖಂಡರಾಗಿದ್ದರೂ ಸಚಿವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡರು. ಅಲ್ಲದೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಶರಣು ಪ್ರಕಾಶ್ ಪಾಟೀಲ್​, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಈಶ್ವರ್ ಖಂಡ್ರೆ ಸೋಲುಂಡರು.

ಪ್ರಮುಖ ಖಾತೆ ಅಲಂಕರಿಸಿದ್ದ ಕಲಘಟಗಿ ಕ್ಷೇತ್ರದಲ್ಲಿ ಸಂತೋಷ್ ಲಾಡ್​, ತೆರದಾಳ ಕ್ಷೇತ್ರದಲ್ಲಿ ಉಮಾಶ್ರೀ, ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ, ಬಂಟ್ವಾಳದಲ್ಲಿ ರಮಾನಾಥ ರೈ, ಮೂಡಬಿದರೆಯಲ್ಲಿ ಅಭಯಚಂದ್ರ ಜೈನ್​ ಸೋಲುಂಡಿದ್ದಾರೆ.

Next Story

RELATED STORIES