Top

ಕುಮಾರಸ್ವಾಮಿ ಸಿಎಂ? ಜೆಡಿಎಸ್​ ಬಾಗಿಲಿಗೆ ಕೈ, ಕಮಲ

ಕರ್ನಾಟಕದ ಮತದಾರ ಅತಂತ್ರ ಫಲಿತಾಂಶ ನೀಡಿದ್ದರಿಂದ ಸರಕಾರ ರಚನೆ ಬಗ್ಗೆ ಗೊಂದಲ ಉಂಟಾಗಿದ್ದು, ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಜೆಡಿಎಸ್ ಜೊತೆ ಮೈತ್ರಿ ಸರಕಾರ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ಆರಂಭಿಸಿವೆ.

2018ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಪ್ರಕಾರ ಬಿಜೆಪಿ 105 ಸ್ಥಾನ ಗೆದ್ದು ಮೊದಲ ಸ್ಥಾನ ಪಡೆದರೆ, ಕಾಂಗ್ರೆಸ್ 78 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. ಜೆಡಿಎಸ್ 40 ಸ್ಥಾನ ಗಳಿಸಿ ಮೂರನೇ ಸ್ಥಾನದಲ್ಲಿದೆ. ಸರಕಾರ ರಚನೆಗೆ 112 ಸ್ಥಾನದ ಅಗತ್ಯವಿದೆ.

ಅತಂತ್ರ ವಿಧಾನಸಭೆ ಉಂಟಾದ ಹಿನ್ನೆಲೆಯಲ್ಲಿ 40 ಸ್ಥಾನ ಪಡೆದ ಜೆಡಿಎಸ್​ನ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಮತ್ತು ಬಿಜೆಪಿ ಆಸಕ್ತಿ ತೋರಿಸಿದ್ದು, ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ಆರಂಭಿಸಿವೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಜತೆ ಕಾಂಗ್ರೆಸ್ ಮುಖಂಡ ಗುಲಾಬ್​ ನಬಿ ಅಜಾದ್ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ರಾಜ್ಯದ ಮುಖಂಡರು ಸಿಂಗಾಪುರದಲ್ಲಿರುವ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿವೆ. ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಕೊಟ್ಟು, ಜಿ.ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್​ ಬಯಸಿದೆ.

ಇದೇ ವೇಳೆ ಬಿಜೆಪಿ ರಾಜ್ಯದ ಮುಖಂಡರು ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಕುಮಾರಸ್ವಾಮಿ ಹಾಗೂ ಇತರೆ ಮುಖಂಡರನ್ನು ಮಾತುಕತೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಆರ್.ಅಶೋಕ್ ಹಾಗೂ ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪ ಮುಂದಿಟ್ಟಿವೆ ಎಂದು ಹೇಳಲಾಗುತ್ತಿದೆ.

Next Story

RELATED STORIES