Top

ಆಪರೇಷನ್ ಕಮಲ ಭೀತಿ: ಗೌಪ್ಯ ಸ್ಥಳಕ್ಕೆ ಕೈ, ಜೆಡಿಎಸ್​ ಶಾಸಕರು?

ಆಪರೇಷನ್ ಕಮಲ ಭೀತಿ: ಗೌಪ್ಯ ಸ್ಥಳಕ್ಕೆ ಕೈ, ಜೆಡಿಎಸ್​ ಶಾಸಕರು?
X

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಆಪರೇಷನ್ ಕಮಲ ನಡೆಸಲು ತೆರೆಮರೆಯ ಕಸರತ್ತು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಖಾಸಗಿ ಹೋಟೆಲ್​ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನ‌ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಲಾಗಿದ್ದು, ಕಾಂಗ್ರೆಸ್ ಚುನಾಯಿತ ಶಾಸಕರ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಗುಲಾಂ ನಬಿ ಅಜಾದ್, ಬಿ.ಕೆ.ಹರಿಪ್ರಸಾದ್, ಹ್ಯಾರಿಸ್, ಭೈರತಿ ಬಸವರಾಜು, ಹೆಚ್.ಎಂ.ರೇವಣ್ಣ, ಮುಂತಾದವರು ಪಾಲ್ಗೊಂಡಿದ್ದಾರೆ.

ಸಭೆಯ ಬಳಿಕ ಶಾಸಕರನ್ನ‌ ಗುಪ್ತ ಜಾಗಕ್ಕೆ ಕರೆದೊಯ್ಯುವ ಸಾಧ್ಯತೆ ಇದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ಗೆ ರಾತ್ರೋರಾತ್ರಿ ಶಿಫ್ಟ್ ಮಾಡಲು ನಾಯಕರ ಚಿಂತನೆ ನಡೆಸಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಶಾಸಕರನ್ನ ಹಿಡಿದಿಡುವ ಪ್ರಯತ್ನ ಕೂಡ ನಡೆದಿದೆ.

ಕಾಂಗ್ರೆಸ್​ನ 10 ಹಾಗೂ ಜೆಡಿಎಸ್​ನ ಮೂವರು ಶಾಸಕರಿಗೆ ಬಿಜೆಪಿ ಬಲೆ ಬೀಸಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಬಿಜೆಪಿ ಶಾಸಕರ ಸಭೆಯನ್ನು ಯಡಿಯೂರಪ್ಪ ಕರೆದಿದ್ದು, ಮಾತಕತೆ ನಡೆಸಿದರು. ಬುಧವಾರ ಕರೆದಿರುವ ಬಿಜೆಪಿ ಶಅಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.

Next Story

RELATED STORIES