Top

ಸುಪಾರಿ ಕಿಲ್ಲರ್ ರೇವಣ್ಣ ಸುಪಾರಿ ಕೊಟ್ಟಿದ್ದು ಡಿಕೆಶಿ- ಸಿ.ಪಿ.ಯೋಗೇಶ್ವರ್

ಸುಪಾರಿ ಕಿಲ್ಲರ್ ರೇವಣ್ಣ ಸುಪಾರಿ ಕೊಟ್ಟಿದ್ದು ಡಿಕೆಶಿ- ಸಿ.ಪಿ.ಯೋಗೇಶ್ವರ್
X

ರಾಮನಗರ: ನನ್ನನ್ನು ಸೋಲಿಸಬೇಕೆಂದು ಜೆಡಿಎಸ್ ರಣತಂತ್ರ ರೂಪಿಸಿತ್ತು, ಡಿಕೆಶಿ ಮತ್ತು ಹೆಚ್ಡಿಕೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ನಡುವೆ ನೇರ ಸ್ಪರ್ಧೆ ಇತ್ತು. ನೆಪಮಾತ್ರಕ್ಕೆ ಹೆಚ್.ಎಂ.ರೇವಣ್ಣ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಡಿಕೆಶಿ ಬ್ರದರ್ಸ್ ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದರು. ಸುಪಾರಿ ಕಿಲ್ಲರ್ ರೇವಣ್ಣ ಸುಪಾರಿ ಕೊಟ್ಟಿದ್ದು ಡಿಕೆಶಿ, ಇದು ಹೆಚ್.ಡಿ.ಕುಮಾರಸ್ವಾಮಿಗೆ ಲಾಭವಾಗಲಿದೆ ಎಂದು ಕಿಡಿಕಾರಿದ್ದಾರೆ.ರಾಜಕಾರಣದಲ್ಲಿ ಸೋಲು ಗೆಲುವು ಸಹಜ, ಯಾವುದೇ ಬಂದರೂ ಸ್ವೀಕರಿಸುವೆ.ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೇ ಗೆದ್ದರೂ, ಕೂದಲೆಳೆಯ ಅಂತರದಲ್ಲಿ ಗೆಲ್ಲುತ್ತಾರೆ.ಹೆಚ್ಡಿಕೆ ನೇರ ಸ್ಪರ್ಧೆ ಮಾಡಿದ್ರೆ, ರೇವಣ್ಣ ನೆಪಮಾತ್ರಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಡಿಕೆಶಿ ಜನರಿಗೆ ಹಣದ ಹೊಳೆ ಹರಿಸಿದ್ದಾರೆ.ನಮ್ಮ ಬಿಜೆಪಿ ಮುಖಂಡರನ್ನು ಹಣ ನೀಡಿ ಖರೀದಿಸಿದ್ದಾರೆ.ಹೀಗಾಗಿ ಸೋಲು ಗೆಲುವು ಯಾವುದೇ ಬಂದರೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.

Next Story

RELATED STORIES