Top

ರ್ಯಾಂಬೋ ಶರಣ್ ಆಗಮನಕ್ಕೆ ಮುಹೂರ್ತ ಫಿಕ್ಸ್..!

ರ್ಯಾಂಬೋ ಶರಣ್ ಆಗಮನಕ್ಕೆ ಮುಹೂರ್ತ ಫಿಕ್ಸ್..!
X

ಸಮ್ಮರ್ ಕಳೆಯೋಕು ಮೊದ್ಲೆ ಸ್ಯಾಂಡಲ್​ವುಡ್​​ ಅಂಗಳದಲ್ಲಿ ರ್ಯಾಂಬೋ ಶರಣ್ ಹಾವಳಿ ಶುರುವಾಗಲಿದೆ.. ಭರ್ಜರಿ ಸಾಂಗ್ಸ್​ನಿಂದ ಈಗಾಗಲೇ ಸಿನಿಮಾ ಒಂದು ರೇಂಜ್​​ಗೆ ಸಿನಿಮಾ ಭರವಸೆ ಮೂಡಿಸಿದೆ.ಇಲ್ಲಿ ಅಧ್ಯಕ್ಷ ಶರಣ್​​​​​ಗೆ, ಮುಗುಳು ನಗೆ ಚೆಲುವೆ ಆಶಿಕಾ ರಂಗನಾಥ್ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ದಿಲ್ ವಾಲಾ ಖ್ಯಾತಿಯ ಅನಿಲ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ರ್ಯಾಂಬೋ ಚಿತ್ರದ ಮೂಲಕ ಶರಣ್ ನಾಯಕರಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ರು. ಇದೀಗ ಅದೇ ಟೈಟಲ್​ನಲ್ಲಿ ಹೊಸ ಸಿನಿಮಾ ಬರ್ತಿರೋದ್ರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಬಾರಿ ಱಂಬೊ ಶರಣ್​ಗೆ ಚಿಕ್ಕಣ್ಣನ ಜೊತೆಯಾಗಿದ್ದಾರೆ.

ಮೇ 18ಕ್ಕೆ ರ್ಯಾಂಬೋ-2 ಚಿತ್ರ ಪ್ರೇಕ್ಷಕ ಮುಂದೆ ಬರ್ತಿದೆ. ಚಿತ್ರದಲ್ಲಿ ನಟಿಸಿರೋ ಚಿಕ್ಕಣ್ಣ, ಛಾಯಾಗ್ರಾಹಕ ಸುಧಾಕರ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್‌, ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಮ್ಯಾನೇಜರ್‌ ನರಸಿಂಹ ಸೇರಿದಂತೆ ಅನೇಕರು ಈ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಅರ್ಜುನ್ ಜನ್ಯಾ ಸಂಗೀತದ ‘ಧಮ್ ಮಾರೋ..’, ‘ಚುಟು ಚುಟು..’,‘ಯವ್ವಾ ಯವ್ವಾ..’, ಬಿಟ್ ಹೋಗ್ಬೇಡ’ ಹೀಗೆ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ..ಅದ್ರಲ್ಲೂ ಕಲರ್​ಫುಲ್ ಸೆಟ್​​ನಲ್ಲಿ ಶೂಟ್ ಮಾಡಿರೋ ‘ಚುಟು ಚುಟು’ ಸಾಂಗ್ ಚಿತ್ರರಸಿಕರ ಬಾಯಲ್ಲಿ ನಲಿದಾಡ್ತಿದೆ..ಅಧ್ಯಕ್ಷ, ರಾಜ್​ ವಿಷ್ಣು ನಂತ್ರ ಈ ಕಾಮಿಡಿ ಥ್ರಿಲ್ಲರ್ ಚಿತ್ರದಲ್ಲಿ ಶರಣ್-ಚಿಕ್ಕಣ್ಣ ಜೊತೆಯಾಗಿದ್ದು, ಸಿನಿಮಾ ಪ್ರೇಕ್ಷಕರನ್ನ ರಂಜಿಸೋ ಸೂಚನೆ ಸಿಕ್ಕಿದೆ..

Next Story

RELATED STORIES