Top

ಮಾನವೀಯತೆ ಮೆರೆದ ಗ್ರಾಮಸ್ಥರು: ಬದುಕಿದ ಗಾಯಾಳು

ಮಾನವೀಯತೆ ಮೆರೆದ ಗ್ರಾಮಸ್ಥರು: ಬದುಕಿದ ಗಾಯಾಳು
X

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ನೀರು ಕುಡಿಸಿ ಜೀವ ಉಳಿಸಿ ಮಾನವೀಯತೆ ಮೆರೆದ ಘಟನೆ ಬೀದರ್ ಜಿಲ್ಲೆ ಬಾಲ್ಕಿ ತಾಲೂಕಿನ ಗಣೇಶಪೂರ್ ವಾಡಿ ಗ್ರಾಮದ ಬಳಿ ನಡೆದಿದೆ.

ಭಾಲ್ಕಿ ಪಟ್ಟಣದಲ್ಲಿ ಎರಡು ಬೈಕ್ ಗಳ ಮಧ್ಯ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡು ಸಾವು-ನೋವಿನ ನಡುವೆ ಹೋರಾಡುತ್ತಿದ್ದ.

ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೊರಾಡುತ್ತಿರುವ ವ್ಯಕ್ತಿಗೆ ನೀರು ಕುಡಿಸಿ ಗ್ರಾಮಸ್ಥರು ಮಾನವಿಯತೆ ಮೆರೆದರೆ, ಇನ್ನು ಕೆಲವರು ವೀಡಿಯೋ ಚಿತ್ರೀಕರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದರು.

ಅಪಘಾತದಲ್ಲಿ ಔರಾದ ತಾಲೂಕಿನ ದೂಪತ ಮಹಾಗಾಂವ್ ನಿವಾಸಿ ಮಾರುತಿ ಸ್ಥಳದಲ್ಲಿಯೇ ಮೃತಪಟ್ಟರೆ. ಇನ್ನೊರ್ವ ಪ್ರಕಾಶ ಗಂಭೀರ ಗಾಯಗೊಂಡಿದ್ದರು. ಪ್ರಕಾಶನನ್ನು ಅಂಬುಲೆನ್ಸ್ ನಲ್ಲಿ ಹೈದ್ರಾಬಾದ ಗೆ ಗ್ರಾಮಸ್ಥರು ಕಳಿಸಿಕೊಟ್ಟರು. ಭಾಲ್ಕಿ ಟೌನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES