Top

ಮಾಜಿ ಕಾರ್ಪೋರೇಟರ್ ಮೇಲೆ ಮಾರಣಾಂತಿಕ ಹಲ್ಲೆ

ಮಾಜಿ ಕಾರ್ಪೋರೇಟರ್ ಮೇಲೆ ಮಾರಣಾಂತಿಕ ಹಲ್ಲೆ
X

ಬೆಂಗಳೂರು: ಇಲ್ಲಿನ ಮಾಜಿ ಕಾರ್ಪೋರೇಟರ್ ಮೇಲೆ ಹಲ್ಲೆ ನಡೆಸಲಾಗಿದೆ.ವಿವಿಪುರಂ ಠಾಣಾ ವ್ಯಾಪ್ತಿಯ ಎನ್ಎಂಎಚ್ ಬಳಿ ಈ ಘಟನೆ ನಡೆದಿದ್ದು, ವೇದವ್ಯಾಸ್ ಭಟ್ ಎಂಬ ಮಾವಳ್ಳಿ ಮಾಜಿ ಕಾರ್ಪೋರೇಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.ಭಟ್ ವಾಕಿಂಗ್ ಗೆ ಹೋಗಿದ್ದ ಸಮಯದಲ್ಲಿ ಎರಡು ಬೈಕ್ ಗಳಲ್ಲಿ ಬಂದಿದ ದುಷ್ಕರ್ಮಿಗಳು, ಮುಖಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಈ ಬಗ್ಗೆ ವಿವಿಪುರಂ ಪೊಲಸ್ ಠಾಣೆಯಲ್ಲಿ ದೂರು ನೀಡಿರುವ ವೇದವ್ಯಾಸ್, ರಾಜಕೀಯ ಮಾಡುತ್ತೀಯಾ, ನಿನಗೆ ರಾಜಕೀಯ ಬೇಕಾ, ಅಂತಾ ಹೇಳಿ ಹಲ್ಲೆ ನಜೆಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೇದವ್ಯಾಸ್ ಚಿಕಿತ್ಸೆ ಪಡೆಯುತ್ತಿದ್ದು, ವಿವಿಪುರಂ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Next Story

RELATED STORIES