Top

ಮನಸಿನ ಬೀದಿ ರಂಗೇರಿಸಿದ ಪವರ್ ಸ್ಟಾರ್..!!

ಮನಸಿನ ಬೀದಿ ರಂಗೇರಿಸಿದ ಪವರ್ ಸ್ಟಾರ್..!!
X

ಪುನೀತ್ ರಾಜ್​​ಕುಮಾರ್ ಹಾಡಿರೋ ಮಾಸ್​ ನಂಬರ್​ಗಳಷ್ಟೆ ಅಲ್ಲ ಮೆಲೋಡಿ ಸಾಂಗ್ಸ್​​ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸದ್ಯ ವಾಸು- ನಾನ್ ಪಕ್ಕಾ ಕಮರ್ಷಿಯಲ್ ಚಿತ್ರಕ್ಕಾಗಿ ಅಪ್ಪು ಅಂತದ್ದೇ ಸಾಂಗ್ ಹಾಡಿ ರಂಗೇರಿಸಿದ್ದಾರೆ. ಅಜಿತ್ ವಾಸನ್​ ಉಗ್ಗಿನ ನಿರ್ದೇಶನದ ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾದಲ್ಲಿ ಅನೀಶ್, ನಿಶ್ವಿಕಾ ನಾಯ್ಡು ಜೋಡಿಯಾಗಿ ಮಿಂಚಿದ್ದಾರೆ.

ಅನೀಶ್ ಅಭಿನಯದ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್​ಕುಮಾರ್ ಹಾಡಿದ್ದ ಕಣ್ಣ ಸನ್ನೆಯಿಂದಲೇನೆ ಸಾಂಗ್ ಸೂಪರ್ ಹಿಟ್ ಆಗಿತ್ತು. ಫಾರಿನ್​ನ ಅದ್ಭುತ ಲೊಕೇಶನ್​ಗಳಲ್ಲಿ ಶೂಟ್ ಮಾಡಿದ್ದ ಕಲರ್​ಫುಲ್ ಸಾಂಗ್ ಬೇಜಾನ್ ಸೌಂಡ್ ಮಾಡಿತ್ತು. ಸದ್ಯ ಅದೇ ಅನೀಶ್ ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಪವರ್ ಸ್ಟಾರ್ ದನಿಯಾಗಿದ್ದಾರೆ.

ಅಕಿರಾ ಸಾಂಗ್ಸ್​​ಗೆ ಟ್ಯೂನ್​ ಹಾಕಿದ್ದ ಅಜನೀಶ್ ಲೋಕನಾಥ್​, ಈ ಚಿತ್ರಕ್ಕೂ ಸಾಂಗ್ಸ್ ಕಂಪೋಸ್ ಮಾಡಿದ್ದಾರೆ.. ಪುನೀತ್ ರಾಜ್​ಕುಮಾರ್ ಜೊತೆಗೆ ಸಿ. ಆರ್ ಬಾಬಿ ಈ ರೊಮ್ಯಾಂಟಿಕ್ ನಂಬರ್​ಗೆ ದನಿಗೂಡಿಸಿದ್ದಾರೆ.. ಚಿತ್ರದ ಹೀರೋ ವಾಸು ಪಕ್ಕಾ ಕಮರ್ಷಿಯಲ್ ಹುಡುಗ ಆದ್ರೂ, ಫಾರಿನ್ ಲೊಕೇಶನ್​ಗಳಲ್ಲಿ ಹಾಡಿಗೆ ಪ್ರೇಯಸಿ ಜೊತೆ ಹೆಜ್ಜೆ ಹಾಕಿದ್ದಾರೆ..

ನಾರ್ವೇ ಮತ್ತು ಸ್ವೀಡನ್​​ನ ಅದ್ಭುತ ಲೊಕೇಶನ್​ಗಳಲ್ಲಿ ‘ರಂಗೇರಿದೆ’ ಹಾಡನ್ನ ಶೂಟ್ ಮಾಡಲಾಗಿದೆ.. ಸದ್ಯ ಅದ್ರ ಮೇಕಿಂಗ್ ಝಲಕ್ ಮಿಕ್ಸ್ ಮಾಡಿರೋ ಲಿರಿಕಲ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.. ಕಿರಣ್ ಕಾವೇರಪ್ಪ ಲಿರಿಕ್ಸ್ ಬರೆದಿದ್ದು, ಒನ್ಸ್ ಅಗೇನ್ ಪವರ್ ಸ್ಟಾರ್ ವಾಯ್ಸ್​​ನಲ್ಲಿ ಸಾಂಗ್ ಕಿವಿಗೆ ಇಂಪೆನಿಸುತ್ತೆ..

Next Story

RELATED STORIES