Top

ಭದ್ರತಾ ಸಿಬ್ಬಂದಿ ನಾಯಿಯಿಂದ ಧೋನಿಗೆ ಸೆಲ್ಯೂಟ್...!

ಭದ್ರತಾ ಸಿಬ್ಬಂದಿ ನಾಯಿಯಿಂದ ಧೋನಿಗೆ ಸೆಲ್ಯೂಟ್...!
X

ಪುಣೆ: ಬಲಿಷ್ಠ ಸನ್‍ರೈಸರ್ಸ್ ವಿರುದ್ಧ ಅತಿ ದೊಡ್ಡ ಗೆಲುವು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿಗೆ ಕ್ರೀಡಾಂಗಣದಲ್ಲಿ ಭದ್ರತಾ ನಾಯಿಯೊಂದು ಗೌರವ ಸೂಚಿಸಿದೆ. ಇದು ಅಚ್ಚರಿಯನ್ನ ಮೂಡಿಸಿದೆ. ಭಾನುವಾರ ಪುಣೆಯಲ್ಲಿ ಸನ್‍ರೈಸರ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 180 ರನ್‍ಗಳ ಗೆಲುವಿನ ಗುರಿಯನ್ನ ಇನ್ನೊಂದು ಓವರ್ ಬಾಕಿ ಇರುವಂತೆ ಧೊನಿ ಪಡೆ ಕೇಲವ 2 ವಿಕೆಟ್ ನಷ್ಟಕ್ಕೆ ಸುಲಭವಾಗಿ ಗೆದ್ದುಕೊಂಡಿತು.

ಪಂದ್ಯದ ನಂತರ ಅತಿ ದೊಡ್ಡ ಗೆಲುವು ಕಂಡ ಧೋನಿಗೆ ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ನಾಯಿ ಸೆಲ್ಯುಟ್ ಹೊಡೆದು ಗೌರವ ಪಡೆದುಕೊಂಡ್ರು.ಇದು ಮಾಹಿಗೂ ಅಚ್ಚರಿಯಾಯ್ತು. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕ್ಯಾಪ್ಟನ್ ಕೂಲ್ ಧೋನಿಗೆ ನಾಯಿ ಅಂದ್ರೆ ತುಂಬ ಇಷ್ಟ.

Next Story

RELATED STORIES