ಪ್ಲೇ ಆಫ್ಗೆ ಚೆನ್ನೈ ಸೂಪರ್ ಕಿಂಗ್ಸ್
ಪುಣೆ: ಅಂಬಾಟಿ ರಾಯ್ಡು ಅವರ ಅಜೇಯ ಶತಕದ ನೆರವಿನಿಂದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಧೋನಿ ಪಡೆ ಸನ್ರೈಸರ್ಸ್ ವಿರುದ್ಧ ಎರಡನೇ ಬಾರಿಯೂ ಗೆದ್ದು ಪ್ಲೇ ಆಫ್ ತಲುಪಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ತಂಡಕ್ಕೆ ಶಿಖರ್ ಧವನ್ 79, ನಾಯಕ ಕೇನ್ ವಿಲಿಯಮ್ಸನ್ 51 ದೀಪಕ್ ಹೂಡಾ 21 ರನ್ ಬಾರಿಸಿದ್ರು. ನಿಗದಿತ ಓವರ್ನಲ್ಲಿ ಕೇನ್ ವಿಲಿಯಮ್ಸನ್ ಪಡೆ 4 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿತು.
180ರನ್ಗಳ ಸವಾಲಿನ ಮೊತ್ತ ಬೆನ್ನತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯ್ಡು ಒಳ್ಳೆಯ ಆರಂಭ ನೀಡಿದ್ರು. ಮೊದಲ ವಿಕೆಟ್ಗೆ ಈ ಜೋಡಿ 134 ರನ್ ಸೇರಿಸಿತು. ಅಂಬಾಟಿ ರಾಯ್ಡು 62 ಎಸೆತದಲ್ಲಿ 7 ಬೌಂಡರಿ 7 ಸಿಕ್ಸ್ ಬಾರಿಸಿದ್ರು. ಕೊನೆಗೆ ಬಂದ ಸುರೇಶ್ ರೈನಾ 2, ನಾಯಕ ಎಂ.ಎಸ್.ಧೋನಿ ಅಜೇಯ 20 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಧೋನಿ ಪಡೆ ಇನ್ನೊಂದು ಓವರ್ ಬಾಕಿ ಇರುವಂತೆ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಪ್ಲೇ ಆಫ್ಗೆ ಲಗ್ಗೆ ಹಾಕಿತು.