Top

ಘರ್ಷಣೆಗೆ ತಿರುಗಿದ ಪಂಚಾಯತ್ ಚುನಾವಣೆ: 8 ಮಂದಿ ಸಾವು

ಘರ್ಷಣೆಗೆ ತಿರುಗಿದ ಪಂಚಾಯತ್ ಚುನಾವಣೆ: 8 ಮಂದಿ ಸಾವು
X

ಪಶ್ವಿಮ ಬಂಗಾಳದಲ್ಲಿ ಸೋಮವಾರಪಂಚಾಯತ್ ಚುನಾವಣೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಘರ್ಷಣೆಗೆ ತಿರುಗಿದೆ. ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡ ಪರಿಣಾಮ ಒಬ್ಬ ಬಿಜೆಪಿ ಕಾರ್ಯಕರ್ತ ಮೃತಪಟ್ಟು, ಕನಿಷ್ಠ 20 ಮಂದಿ ಗಾಯಗೊಂಡ ಘಟನೆ ಕೂಚ್ ಬಿಹಾರ್ ಜಿಲ್ಲೆಯಲ್ಲಿ ಸಂಭವಿಸಿದ್ದು, ಮಾಧ್ಯಮಗಳ ವಾಹನವನ್ನೂ ಜಖಂಗೊಳಿಸಲಾಗಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಕೆಲವು ಕಡೆಗಳಲ್ಲಿ ನಾಮಪತ್ರಕ್ಕೂ ಬೆಂಕಿ ಹಚ್ಚಿ ಪ್ರತಿಭಟನೆ ನಡೆದಿದೆ. ಅಲ್ಲದೇ ಕೆಲವು ಮತಪೆಟ್ಟಿಗೆಗಳನ್ನು ಕೂಡ ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದಾರೆ.

ಏಪ್ರಿಲ್ 2 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಆದರೆ ಕಾಂಗ್ರೆಸ್​, ಬಿಜೆಪಿ ಮತ್ತು ಸಿಪಿಎಂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡದೇ ಸರಕಾರ ಉಗ್ರವಾದಿ ರೀತಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಆದರೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಅರೋಪವನ್ನು ನಿರಾಕರಿಸಿದ್ದು, ಚುನಾವಣಾ ಘರ್ಷಣೆಯಲ್ಲಿ ತಮ್ಮ ಪಕ್ಷದ 14 ಮಂದಿಗೂ ಅಧಿಕ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

Next Story

RELATED STORIES