ಇದೇ ವಾರದಲ್ಲಿ ಪೈಲ್ವಾನ್ ಅಖಾಡಕ್ಕೆ ಕಿಚ್ಚ ಎಂಟ್ರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೀಸೆಂಟಾಗಷ್ಟೇ ದಿ ವಿಲನ್ ಚಿತ್ರದ ಶೂಟಿಂಗ್ ಮುಗಿಸಿದ ಕಿಚ್ಚ ಮೊನ್ನೆಯಷ್ಟೇ ಕೋಟಿಗೊಬ್ಬ 3 ಚಿತ್ರದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ 3 ಚಿತ್ರದಿಂದ ಬ್ರೇಕ್ ತೊಗೊಂಡು ಪೈಲ್ವಾನ್ ಚಿತ್ರದತ್ತ ಗಮನ ಹರಿಸಿದ್ದು ಫೈನಲಿ ಫೈಲ್ವಾನ್ ಚಿತ್ರದ ಶೂಟಿಂಗ್ಗೆ ಡೇಟ್ಸ್ ಕೊಟ್ಟಿದ್ದಾರೆ ಕಿಚ್ಚ.
ಇದೇ ತಿಂಗಳ 17 ರಿಂದ ಪೈಲ್ವಾನ್ ಚಿತ್ರೀಕರಣ ಶುರುವಾಗಲಿದೆ. ಮೊದಲ ಶೆಡ್ಯೂಲ್ ಚೈನ್ನೆನಲ್ಲಿ ನಡೆಯಲಿದ್ದು, ಇಂದು ರಾತ್ರಿ ಚಿತ್ರತಂಡ ಚೈನ್ನೆಗೆ ಪಯಣ ಬೆಳೆಸಲಿದೆ. ಕಿಚ್ಚ ಸುದೀಪ್, ಶರತ್ ಲೋಹಿತಾಶ್ವ, ಹೆಬ್ಬುಲಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಕಬೀರ್ ದುಹಾನ್ ಸಿಂಗ್ ಮತ್ತಿತರರು ಫಸ್ಟ್ ಶೆಡ್ಯೂಲ್ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ.
ಪೈಲ್ವಾನ್ ಚಿತ್ರದ ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯಾ ಅಂದ್ರೆ ಕನ್ನಡ ಚಿತ್ರರಂಗದ 10 ರಿಂ15 ಜನ ವೆಲ್ನೋನ್ ಆರ್ಟಿಸ್ಟ್ಗಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ..ಸದ್ಯದಲ್ಲೇ ನಾಯಕಿಯ ಆಯ್ಕೆಯಾಗಲಿದ್ದು,ಬಹುತೇಕ ಸ್ಯಾಂಡಲ್ವುಡ್ ನಾಯಕಿಯೇ ಫೈನಲ್ ಆಗಲಿದೆ.ಹೆಬ್ಬುಲಿ ಚಿತ್ರದಲ್ಲಿ ಕಿಚ್ಚನನ್ನ ಹೊಸ ಲುಕ್ ಮತ್ತು ಗೆಟಪ್ನಲ್ಲಿ ತೋರಿಸಿದ್ದ ನಿರ್ದೇಶಕ ಕೃಷ್ಣ, ಪೈಲ್ವಾನ್ ಚಿತ್ರದಲ್ಲಿ ಸುದೀಪ್ರನ್ನ ವಿಭಿನ್ನವಾಗಿ ತೋರಿಸೋ ಪ್ರಯತ್ನದಲ್ಲಿದ್ದಾರೆ.