Top

ಆರ್​.ಆರ್​.ನಗರ ಅಭ್ಯರ್ಥಿ ಮುನಿರತ್ನಗೆ ಜಾಮೀನು

ಆರ್​.ಆರ್​.ನಗರ ಅಭ್ಯರ್ಥಿ ಮುನಿರತ್ನಗೆ ಜಾಮೀನು
X

ಅಕ್ರಮ ವೋಟರ್ ಐಡಿ ಸಂಗ್ರಹ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಜಾಮೀನು ಲಭಿಸಿದೆ.

7 ನೇ ಎಸಿಎಂಎಂ ಕೋರ್ಟ್ ನಿಂದ ಷರತ್ತು ಬದ್ದ ಜಾಮೀನು ನೀಡಿದ್ದು, 25 ಸಾವಿರ ಬಾಂಡ್, 3 ಸಾವಿರ ಶ್ಯೂರಿಟಿ ನೀಡಲು‌ ಷರತ್ತು ವಿಧಿಸಿದೆ. ಶರವಣ, ಮಂಜುಳ, ಶಾರದ, ರೇಖಾ, ಚಿನ್ನತಂಬಿ. ಚಿನ್ನದೊರೈ ಸೇರಿ 13 ಆರೋಪಿಗಳಿಗೂ ಜಾಮೀನು ನೀಡಲಾಗಿದೆ.

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖುದ್ದು ಕೋರ್ಟ್‌ಗೆ ಹಾಜರಾದ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಅವರಿಗೆ ಜಾಮೀನು ನೀಡಲಾಗಿದೆ.

Next Story

RELATED STORIES