Top

ಅಮ್ಮ ಐ ಲವ್ ಯು ಎಂದ ಸರ್ಜಾ ಬ್ರದರ್ಸ್​

ಅಮ್ಮ ಐ ಲವ್ ಯು ಎಂದ ಸರ್ಜಾ ಬ್ರದರ್ಸ್​
X

ಅಮ್ಮಂದಿರ ದಿನಾಚರಣೆಯ ವಿಶೇಷವಾಗಿ ಸ್ಯಾಂಡಲ್​ವುಡ್​ನ ಸರ್ಜಾ ಬ್ರದರ್ಸ್​ ಅಪರೂಪದ ಉಡುಗೊರೆಯನ್ನ ಕೊಟ್ಟಿದ್ದಾರೆ. ಚಿರು ಸರ್ಜಾ ಅಭಿನಯದ ಅಮ್ಮ ಐ ಲವ್​ ಯೂ ಚಿತ್ರದ ಕಡೆಯಿಂದ ಈ ಗಿಫ್ಟನ್ನ ಎಲ್ಲಾ ತಾಯಂದಿರಿಗೂ ಅರ್ಪಣೆ ಮಾಡಲಾಗಿದೆ.

ಚಿರಂಜೀವಿ ಸರ್ಜಾ ಸದ್ಯ ಅಮ್ಮ ಐ ಲವ್​ ಯೂ ಚಿತ್ರದಲ್ಲಿ ಬ್ಯುಸಿಯಾಗಿರೋದು ಗೊತ್ತೇಯಿದೆ. ಇನ್ನೇನು ಚಿತ್ರೀಕರಣದ ಕೊನೆಯ ಹಂತ ತಲುಪಿರೋ ಈ ಚಿತ್ರ ಪೋಸ್ಟರ್​ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದೀಗ ಅಮ್ಮ ಐ ಲವ್​ ಯೂ ಚಿತ್ರತಂಡದಿಂದ ಮದರ್ಸ್​ ಡೇಗೆ 40 ಸೆಕೆಂಡ್​ಗಳ ಟೀಸರ್​ ಒಂದನ್ನ ರಿಲೀಸ್​ ಮಾಡಿದ್ದಾರೆ.

ಈ ಟೀಸರ್​ಗೆ ಧ್ರುವಾ ಸರ್ಜಾ ವಾಯ್ಸ್​ ಓವರ್​ ಕೊಟ್ಟಿದ್ದು, ಮಕ್ಕಳು ಪ್ರತಿದಿನ ತಾಯಿಯ ಮೇಲೆ ಹೇಗೆ ಅವಲಂಬಿತರಾಗಿರ್ತಾರೆ, ತಾಯಿ ಮಕ್ಕಳ ಜೀವನದಲ್ಲಿ ಎಂತಹ ಪ್ರಮುಖ ಪಾತ್ರ ವಹಿಸ್ತಾಳೆ ಅನ್ನೋದನ್ನ ಬಹಳ ಸಿಂಪಲ್ಲಾಗಿ ಹೇಳಲಾಗಿದೆ. ಈ ಹಿಂದೆ ಚೌಕ ಚಿತ್ರದ ಅಪ್ಪ ಐ ಲವ್​ ಯೂ ಪ ಸಾಂಗ್​ ದೊಡ್ಡ ಮಟ್ಟದಲ್ಲಿ ಪಾಪ್ಯುಲರ್​ ಆದ ಹಾಗೇ ಈ ಟೀಸರ್​ ಕೂಡ ವೈರಲ್​ ಆಗೋ ಹಾಗಿದೆ..

ಅಂದ್ಹಾಗೇ ಅಮ್ಮ ಐ ಲವ್ ಯೂ ಸಿನಿಮಾ ಕೂಡ ತಾಯಿ ಮತ್ತು ಶ್ರೀಮಂತನ ಮಗನ ನಡುವೆ ಕಥಾಹಂದರ ನಡೆಯಲಿದ್ದು, ಚಿರು ತಾಯಿ ಪಾತ್ರದಲ್ಲಿ ಹಿರಿಯ ನಟಿ ಸಿತಾರ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೇ ಅಮ್ಮ ಐ ಲವ್ ಯೂ, ತಮಿಳಿನ ಪಿಚ್ಚೈಕಾರನ್ ಚಿತ್ರದ ರಿಮೇಕ್​ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.

ದ್ವಾರಕೀಶ್ ನಿರ್ಮಾಣದ 51 ಸಿನಿಮಾ ಇದಾಗಿದ್ದು, ಆ ದಿನಗಳ ಖ್ಯಾತಿಯ ಕೆ.ಎಂ ಚೈತನ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿರುಗೆ ಜೋಡಿಗಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಚಿತ್ರವನ್ನ ತೆರೆಗೆ ತರೋ ಪ್ಲಾನ್​ನಲ್ಲಿದೆ ಚಿತ್ರತಂಡ.

Next Story

RELATED STORIES