Top

ಲಾಲೂ ಪುತ್ರನ ಮದುವೆಯಲ್ಲಿ ಊಟ ದೋಚಿದ ಸ್ಥಳೀಯರು

ಲಾಲೂ ಪುತ್ರನ ಮದುವೆಯಲ್ಲಿ ಊಟ ದೋಚಿದ ಸ್ಥಳೀಯರು
X

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ವಿವಾಹ ಸಮಾರಂಭದಲ್ಲಿ ಸ್ಥಳೀಯರು ಗಣ್ಯರು ಹಾಗೂ ಮಾಧ್ಯಮಗಳಿಗೆ ಇರಿಸಿದ್ದ ಭೋಜನವನ್ನು ದೋಚಿದ ಘಟನೆ ನಡೆದಿದೆ.

ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯ ರೈ ಅವರ ವಿವಾಹ ನಡೆದಿದ್ದು, ವಧು-ವರರು ಹಾರ ಬದಲಾಯಿಸಿಕೊಳ್ಳುತ್ತಿದ್ದಂತೆ ಜನರು ಊಟಕ್ಕೆ ಮುಗಿಬಿದ್ದರು.

ಸುಮಾರು 7 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಗಣ್ಯರು ಮತ್ತು ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ಜಾಗಕ್ಕೆ ನುಗ್ಗಿದ ಸ್ಥಳೀಯರು ಊಟ ಹೊತ್ತೊಯ್ದರು. ಈ ವೇಳೆ ಚೇರು, ಟೇಬಲ್ ಮುಂತಾದ ವಸ್ತುಗಳು ಜಖಂಗೊಂಡವು.

Next Story

RELATED STORIES