Top

ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಅಭಿಷೇಕ್ ಶರ್ಮಾ

ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಅಭಿಷೇಕ್ ಶರ್ಮಾ
X

ನವದೆಹಲಿ: ಟೀಂ ಇಂಡಿಯಾಕ್ಕೆ ಮತ್ತೊಬ್ಬ ಪ್ರತಿಭಾವಂತ ಕ್ರಿಕೆಟಿಗ ಸಿಕ್ಕಿದ್ದಾನೆ. ನಿನ್ನೆ ಆಡಿದ ಮೊದಲ ಐಪಿಎಲ್ ಪಂದ್ಯದಲ್ಲೆ ಆರ್‍ಸಿಬಿ ವಿರುದ್ದ ಅಬ್ಬರದ ಬ್ಯಾಟಿಂಗ್ ಮಾಡಿದ ಮಿಂಚಿದ್ದಾನೆ. ಆತನ ಹೆಸರು ಅಭಿಷೇಕ್ ಶರ್ಮಾ. ಪಂಜಾಬ್‍ನವರಾಗಿರುವ ಅಭಿಷೇಕ್ ಶರ್ಮಾ ಆರ್‍ಸಿಬಿ ವಿರುದ್ಧ ಕೇವಲ 19 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಜೇಯ 46 ರನ್ ಬಾರಿಸಿ242.11 ಸ್ಟ್ರೈಕ್‍ರೇಟ್ ಹೊಂದಿದ್ದಾರೆ. ಆಡಿದ ಚೊಚ್ಚಲ ಪಂದ್ಯದಲ್ಲೆ ಮಿಂಚಿರುವ 17 ವರ್ಷದ ಅಭಿಷೇಕ್ ಶರ್ಮಾ ತಾನು ಭವಿಷ್ಯದ ಟೀಂ ಇಂಡಿಯಾ ಆಟಗಾರ ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಡೆಲ್ಲಿ ತಂಡ ಈ ಬಾರಿಯೂ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು ಪ್ಲೇ ಆಫ್‍ಗೆ ಹೋಗೋದು ಕನಸಿನ ಮಾತಾಗಿದೆ. ಮುಂದಿನ ವಾರ ಮುಂಬೈ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ. ಹೀಗಾಗಿ ತಂಡದಲ್ಲಿ ಆಡಲು ಅವಕಾಶ ಸಿಗದ ಆಟಗಾರರಿಗೆ ಆಡಲು ಅವಕಾಶ ನೀಡಲಾಗ್ತಿದೆ.

Next Story

RELATED STORIES